Friday, November 22, 2024
Google search engine
Homeತಾಜಾ ಸುದ್ದಿಬಿಹಾರದಲ್ಲಿ 9 ದಿನದಲ್ಲಿ 5ನೇ ಸೇತುವೆ ಕುಸಿತ!

ಬಿಹಾರದಲ್ಲಿ 9 ದಿನದಲ್ಲಿ 5ನೇ ಸೇತುವೆ ಕುಸಿತ!

ನಿರ್ಮಾಣ ಹಂತದಲ್ಲಿದ್ದ 3 ಕೋಟಿ ರೂ. ವೆಚ್ಚದ ಸೇತುವೆ ಕುಸಿದುಬಿದ್ದಿದೆ. ಇದರಿಂದ ಬಿಹಾರದಲ್ಲಿ ಸೇತುವೆ ಕುಸಿತ ಪ್ರಕರಣಗಳು ದಿನಕ್ಕೊಂದು ಸಂಭವಿಸುತ್ತಿದ್ದು, ಕಳೆದ 9 ದಿನಗಳಲ್ಲಿ 5ನೇ ಪ್ರಕರಣ ಇದಾಗಿದೆ.

ಮಧುಬನಿ ಜಿಲ್ಲೆಯಲ್ಲಿ ಬೇಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. 2021ರಿಂದ 75 ಮೀಟರ್ ಉದ್ದದ ಸೇತುವೆ ನಿರ್ಮಾಣ ಹಂತದಲ್ಲಿತ್ತು.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಿರ್ಮಿಸಲಾಗಿದ ಸೇತುವೆ ನೀರಿನ ಹರಿವಿಗೆ ತಡೆಯದ ಸೇತುವೆ ಆಧಾರಸ್ತಂಭ ಕುಸಿದು ಬಿದ್ದು ನದಿಯಲ್ಲಿ ಕೊಚ್ಚಿ ಹೋಗಿದೆ.

ಎರಡು ದಿನಗಳ ಹಿಂದೆಯಷ್ಟೇ 13 ವರ್ಷದ ಹಳೆಯ ಸೇತುವೆ ಭಾಗಶಃ ಕುಸಿದಿರುವ ಘಟನೆ ಬಿಹಾರದ ಕಿಶನ್ ಗಂಜ್ ಜಿಲ್ಲೆಯಲ್ಲಿ ಸಂಭವಿಸಿತ್ತು.

ಬನ್ಸ್ ಬಾರಿ ಶ್ರವಣ್ ಚೌಕ್ ಬಳಿ ಮರಿಯಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 70 ಅಡಿ ಉದ್ದದ ಸೇತುವೆ ನೀರಿನ ಬಿರುಸಿನ ಹರಿವಿನಿಂದ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗೊಂಡ ಪ್ರಕರಣ ವರದಿಯಾಗಿಲ್ಲ.

ನದಿ ನೀರು ಹರಿಯತ್ತಿರುವ ವೇಗಕ್ಕೆ ಸೇತುವೆ ಅಲ್ಲಾಡುತ್ತಾ ಕುಸಿದು ಬಿದ್ದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸೇತುವೆಯನ್ನು 2011ರಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಉದ್ಘಾಟನೆಯಾದ 6 ತಿಂಗಳಲ್ಲಿ ಸೇತುವೆ ಹಾನಿಯೊಳಗಾಗಿದ್ದು, ದುರಸ್ತಿ ಮಾಡಲಾಗಿತ್ತು.

ಈ ಸೇತುವೆ ನಗರವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಆಗಿದ್ದು, ಕೂಡಲೇ ದುರಸ್ಥಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸೇತುವೆ ಕುಸಿತಕ್ಕೂ ಮುನ್ನ ಸಿವಾನ್ ಮತ್ತು ಅರೆರಿಯಾ ಜಿಲ್ಲೆಗಳಲ್ಲಿ ಕೂಡ ಸೇತುವೆ ಕುಸಿದು ಬಿದ್ದಿದ್ದವು. ಕೆಲವು ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಕುಸಿದರೆ ಇನ್ನೊಂದು ನಿರ್ಮಾಣ ಹಂತದಲ್ಲೇ ಕುಸಿದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments