ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೂನ್ ರಾಬರ್ಟ್ ಕೆ. ಕೆನಡಿ ನಾಯಿ ಮಾಂಸ ಸೇವಿಸುತ್ತಿದ್ದಾರೆ ಎನ್ನಲಾದ ಫೋಟೊ ಈಗ ಜಾಗದಲ್ಲಿ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.
2010ರಲ್ಲಿ ಕೊರಿಯಾ ಪ್ರವಾಸದ ವೇಳೆ ಶ್ವಾನ ಮಾಂಸಕ್ಕೆ ಹೆಸರಾದ ಹೋಟೆಲ್ ಗೆ ಭೇಟಿ ನೀಡಿದ ವೇಳೆ ಮಾಂಸ ಸೇವಿಸುತ್ತಿರುವ ಫೋಟೊ ಈಗ ವಿವಾದಕ್ಕೆ ಕಾರಣವಾಗಿದೆ.
ಫೋಟೊ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಜೂನಿಯರ್ ರಾಬರ್ಟ್ ಕೆ. ಕೆನಡಿ, ನಾವು ಕೆಲವು ವರ್ಷಗಳ ಹಿಂದೆ ಏಷ್ಯಾ ಪ್ರವಾಸ ಕೈಗೊಂಡ ವೇಳೆ ತೆಗೆದ ಫೋಟೊ ಇದಾಗಿದೆ. ಆದರೆ ನಾನೆಂದೂ ನಾಯಿ ಮಾಂಸವನ್ನು ಸೇವಿಸಿಲ್ಲ. ಅದು ಫೋಟೊಗಾಗಿ ನೀಡಿದ ಫೋಸ್ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.
ನಾನು ಆಡುಮರಿಯನ್ನು ಸೇವಿಸಿದ ಚಿತ್ರ ಇದಾಗಿದೆ. ಆದರೆ ಇದು ನಾಯಿ ಮಾಂಸ ಎಂದು ಬಿಂಬಿಸಲಾಗಿದೆ. ನಿಜವಾದ ಮಾಂಸಹಾರಿಗಳಿಗೆ ಇದು ಚೆನ್ನಾಗಿ ಗೊತ್ತಾಗುತ್ತದೆ. ನಾಯಿ ಯಾವುದು ಆಡು ಮರಿ ಯಾವುದು ಎಂಬುದು. ಕೆಲವು ಸಸ್ಯಹಾರಿಗಳು ಗೊತ್ತಿಲ್ಲದೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.