Friday, November 22, 2024
Google search engine
Homeತಾಜಾ ಸುದ್ದಿಕೆಆರ್ ಎಸ್ ಡ್ಯಾಂ 100ರ ಗಡಿ ದಾಟಲು ಅರ್ಧ ಅಡಿಯಷ್ಟೇ ಬಾಕಿ!

ಕೆಆರ್ ಎಸ್ ಡ್ಯಾಂ 100ರ ಗಡಿ ದಾಟಲು ಅರ್ಧ ಅಡಿಯಷ್ಟೇ ಬಾಕಿ!

ಕೊಡಗು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್ ಎಸ್ ಜಲಾಶಯದ ಒಳಹರಿವು ಹೆಚ್ಚಿದ್ದು, 100 ಅಡಿ ಭರ್ತಿಗೆ ಕ್ಷಣಗಣನೆ ಶುರುವಾಗಿದೆ.

ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಳೆದ ಒಂದು ವಾರದಲ್ಲಿ ಕೆಆರ್ ಎಸ್ ನಲ್ಲಿ 7 ಟಿಎಂಸಿ ಭರ್ತಿಯಾಗಿದೆ. ಇದರಿಂದ 100ರ ಗಡಿ ದಾಟಲು ಅರ್ಧ ಅಡಿ ಮಾತ್ರ ಬಾಕಿ ಇದೆ.

ಕೆಆಎಸ್ ಜಲಾಶಯದ ಗರಿಷ್ಠ ಮಟ್ಟ 124 ಅಡಿಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 80 ಅಡಿಯಷ್ಟು ಕೂಡ ಭರ್ತಿಯಾಗಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಕರ್ನಾಟಕ-ತಮಿಳುನಾಡು ನಡುವಿನ ಕಾವೇರಿ ವಿವಾದ ಸೃಷ್ಟಿಯಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಕೆಆರ್ ಎಸ್ ಜಲಾಶಯಕ್ಕೆ ಪ್ರತಿನಿತ್ಯ 13 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವು ಬರುತ್ತಿದ್ದು, ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಇನ್ನಷ್ಟು ದಿನ ಇದೇ ಮಟ್ಟದಲ್ಲಿ ಒಳಹರಿವು ಬರುವ ನಿರೀಕ್ಷೆ ಇದ್ದು, ಈ ಬಾರಿ ಕೆಆರ್ ಎಸ್ ಡ್ಯಾಂ ಭರ್ತಿಯಾಗುವ ಭರವಸೆ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments