ನಿಖರ ಭವಿಷ್ಯಕ್ಕೆ ಹೆಸರಾದ ಬಾಬಾ ವೆಂಗಾ ಎಂದೇ ಖ್ಯಾತಿ ಪಡೆದಿರುವ ವಾಂಗೆಲಿಯಾ ಪಾಂಡೆವಾ ಗುಸ್ಚೆರೋವಾ ಮತ್ತೊಂದು ಭವಿಷ್ಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಬಲ್ಗೇರಿಯಾ ಮೂಲದ ಬಾಬಾ ವೆಂಗಾ 1996ರಲ್ಲಿ 85ನೇ ವಯಸ್ಸಿಗೆ ಮೃತಪಟ್ಟಿದ್ದರು. ಜೀವತಾವಧಿಯಲ್ಲಿ ಅವರು ನುಡಿದ ಹಲವಾರು ಭವಿಷ್ಯಗಳು ನಿಜವಾಗಿದ್ದು, ಆಧುನಿಕ ನಾಸ್ಟ್ರಡಾಮಸ್ ಎಂದೇ ಖ್ಯಾತರಾಗಿದ್ದರು.
12ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡಿದ್ದು, ಅಂದಿನಿಂದ ನನಗೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಉಡುಗೊರೆ ಸಿಕ್ಕಿತು ಎಂದು ಅವರು ಹೇಳಿಕೊಂಡಿದ್ದರು.
ಅಮೆರಿಕದ ಮೇಲೆ 2001 ಸೆಪ್ಟೆಂಬರ್ 11ರಂದು ವಿಮಾನದ ಮೂಲಕ ದಾಳಿ ಮಾಡಲಿದ್ದಾರೆ ಎಂದು ನೀಡಿದ್ದ ಭವಿಷ್ಯ ನಿಜವಾದ ನಂತರ ಬಾಬಾ ವೆಂಗಾ ಅವರ ಭವಿಷ್ಯಕ್ಕೆ ಅಪಾರ ಜನಪ್ರಿಯತೆ ಉಂಟಾಗಿದೆ.
ಬಾಬಾ ವೆಂಗಾ ನುಡಿದ ಭವಿಷ್ಯಗಳ ವಿವರ ಹೀಗಿದೆ.
2025: ಯುರೋಪ್ನಲ್ಲಿ ಪ್ರಮುಖ ಸಂಘರ್ಷದಿಂದ ಜನಸಂಖ್ಯೆಯಲ್ಲಿ ಭಾರೀ ಕುಸಿತ
2028: ಶುಕ್ರ ಗ್ರಹ ತಲುಪಿವ ಮನುಷ್ಯರು ಹೊಸ ಇಂಧನ ಶಕ್ತಿಯ ಆವಿಷ್ಕಾರ ಮಾಡಲಿದೆ
2033: ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಮಂಜುಗಡ್ಡೆಗಳ ಕರಗುವಿಕೆಯು ಸಮುದ್ರ ಮಟ್ಟದಲ್ಲಿ ಏರಿಕೆಯಾಗಿ ಹಲವು ನಗರಗಳು ಮುಳುಗಡೆ ಆಗಲಿವೆ.
2076: ಕಮ್ಯುನಿಸಂ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಪಡೆಯಲಿದೆ.
2130: ಅನ್ಯಗ್ರಹ ಜೀವಿಗಳ ಸಂಪರ್ಕ ಸಾಧಿಸಲಿರುವ ಜಗತ್ತು
2170: ಜಾಗತಿಕ ಮಟ್ಟದಲ್ಲಿ ಭೀಕರ ಬರ
3005: ಮಂಗಳದ ಮೇಲೆ ಯುದ್ಧ.
3797: ಸೌರವ್ಯೂಹದೊಳಗೆ ಮತ್ತೊಂದು ಗ್ರಹಕ್ಕೆ ತೆರಳುವ ಸಾಮರ್ಥ್ಯ. ಭೂಮಿಯ ನಾಶ.
5079: ಪ್ರಪಂಚದ ಅಂತ್ಯ