ಪ್ರಯಾಣಿಕರ ಲಗೇಜ್ ಬ್ಯಾಗ್ ಕಳೆದು ಹೋಗುವುದರಲ್ಲಿ ಭಾರತದ ಏರ್ ಇಂಡಿಯಾ ವಿಮಾನ ಸಂಸ್ಥೆ ವಿಶ್ವದ ಅಗ್ರಸ್ಥಾನ ಪಡೆದ ಕುಖ್ಯಾತಿಗೆ ಪಾತ್ರವಾಗಿದೆ.
ಲಗೇಜ್ ಲಾಸರ್ಸ್ ಡಾಕ್ ಕಾಮ್ ಜಗತ್ತಿನ ಪ್ರಮುಖ ವಿಮಾನ ಸಂಸ್ಥೆಗಳ ಪ್ರಯಾಣಿಕರ ಲಗೇಜ್ ನಾಪತ್ತೆ ಪ್ರಕರಣಗಳ ಸಂಖ್ಯೆಗಳನ್ನು ಆಧರಿಸಿ ಸಮೀಕ್ಷೆ ನಡೆಸಿದ್ದು, ಭಾರತದ ಏರ್ ಇಂಡಿಯಾಗೆ ಪ್ರಥಮ ಸ್ಥಾನ ನೀಡಿದೆ.
ಒಂದು ತಿಂಗಳ ಅಂತರದಲ್ಲಿ ನಡೆದ ಸಮೀಕ್ಷೆಯಲ್ಲಿ ಏರ್ ಇಂಡಿಯಾ ವಿಮಾನದ ಸರಾಸರಿ 36 ಪ್ರಯಾಣಿಕರಿಗೆ ಒಬ್ಬರು ಲಗೇಜ್ ಕಳೆದುಕೊಳ್ಳುತ್ತಾರೆ. ಒಂದೇ ತಿಂಗಳಲ್ಲಿ ಏರ್ ಇಂಡಿಯಾದ 50,0001 ಪ್ರಯಾಣಿಕರು ತಮ್ಮ ಲಗೇಜ್ ಕಳೆದುಕೊಂಡಿದ್ದಾರೆ.
ಪ್ರೇಯಸಿಯ ಲಗೇಜ್ ಕಳುವಾಗಿದ್ದರಿಂದ ಯುವಕನೊಬ್ಬ ಲಗೇಜ್ ಲಾಸರ್ಸ್ ಡಾಟ್ ಕಾಮ್ ವೆಬ್ ಸೈಟ್ ಆರಂಭಿಸಿದ್ದು, ಜಗತ್ತಿನ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ನಾಪತ್ತೆ ಪ್ರಕರಣಗಳ ವಿವರ ಸಂಗ್ರಹಿಸಿ ನೆರವಾಗುವ ಕೆಲಸ ಮಾಡಲಾಗುತ್ತಿದೆ.
ಏರ್ ಇಂಡಿಯಾ ನಂತರದ ಸ್ಥಾನವನ್ನು ವೆಸ್ಟ್ ಜೆಟ್ ಏರ್ ವೇಸ್, ಏರ್ ಲಿಂಗಸ್, ಬ್ರಿಟಿಷ್ ಏರ್ ವೇಸ್, ಯುಕೆಯ ನ್ಯಾಷನಲ್ ಕ್ಯಾರಿಯರ್ಸ್, ಕ್ರಮವಾಗಿ ನಂತರದ ಸ್ಥಾನ ಗಳಿಸಿದ್ದು, ಈ ವಿಮಾನಗಳ ಒಟ್ಟಾರೆ ಪ್ರಯಾಣಿಕರು ಕಳೆದುಕೊಂಡ ಲಗೇಜ್ ಸಂಖ್ಯೆ 72,594 ಆಗಿದೆ.