ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, 53 ವರ್ಷಗಳ ನಂತರ ಇದೇ ಮೊದಲ ಬಾರಿಗೆ 2 ದಿನಗಳ ಕಾಲ ನಡೆಯಲಿದೆ.
ಒಡಿಶಾದ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆ ಕಾರ್ಯಕ್ರಮಗಳು 9 ದಿನ ನಡೆದರೂ ಸಾಮಾನ್ಯವಾಗಿ ಒಂದು ದಿನ ರಥಯಾತ್ರೆ ನಡೆಯುತ್ತದೆ. ಆದರೆ 1971ರ ನಂತರ ಇದೇ ಮೊದಲ ಬಾರಿ 2 ದಿನಗಳ ಕಾಲ ನಡೆಯಲಿರುವುದು ವಿಶೇಷ.
ಪುರಿ ಜಗನ್ನಾಥ ರಥಯಾತ್ರೆ ಒಂದು ದಿನಕ್ಕೆ ಸೀಮಿತಗೊಳಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಬಿಜೆಪಿ ಸರ್ಕಾರ ಇದೇ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದು, ಎರಡು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಒಡಿಶಾದ ಬಿಜೆಪಿ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಆಹ್ವಾನಿಸಿದೆ. ರಾಷ್ಟ್ರಪತಿ ದ್ರೌಪದಿ ಮರ್ಮು ಈ ಬಾರಿಯ ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಎರಡು ದಿನಗಳ ಕಾಲ ಪುರಿಯಲ್ಲಿ ಉಳಿದುಕೊಳ್ಳಲಿದ್ದಾರೆ.
ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಲಕ್ಷಾಂತರ ಜನರು ಭಾಗಿಯಾಗುತ್ತಾರೆ. ಇತ್ತೀಚೆಗಷ್ಟೇ ನ್ಯಾಯಾಲಯದ ತೀರ್ಪಿನ ಪ್ರಕಾರ ದೇವಸ್ಥಾನದ ನಾಲ್ಕೂ ದ್ವಾರಗಳನ್ನು ತೆರೆಯಲಾಗಿತ್ತು. ಇದರಿಂದ ಭಕ್ತರಲ್ಲಿ ಉತ್ಸಾಹ ಕೂಡ ಹೆಚ್ಚಾಗಿದೆ.
ಇದೇ ವೇಳೆ ಪುರಿ ನಂತರ ಹೆಚ್ಚು ಖ್ಯಾತಿ ಪಡೆದಿರುವ ಗುಜರಾತ್ ನ ಅಹಮದಾಬಾದ್ ನಲ್ಲಿ ಭಾನುವಾರ ಬೆಳಿಗ್ಗೆ ಜಗನ್ನಾಥ ರಥಯಾತ್ರೆ ಆರಂಭಗೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ರಥ ಎಳೆಯಲು ಕೈ ಜೋಡಿಸಲು ಮುಗಿಬಿದ್ದರು.
ರಥಯಾತ್ರೆಗೆ ಪ್ರಧಾನಮಂತ್ರಿ ಪ್ರಧಾನಿ ಮೋದಿ ಶುಭ ಕೋರಿದ್ದು, ಮುಖ್ಯುಮಂತ್ರಿ ಭುಪೇಂದ್ರ ಪಾಟೀಲ್ ದೇವಸ್ಥಾನದ ಅಂಗಳದ ಕಸ ಗುಡಿಸಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪತ್ನಿ ಸೋನಾಲ್ ಶಾ ಆರತಿ ಬೆಳಗಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು.