Friday, November 22, 2024
Google search engine
Homeಕ್ರೀಡೆ2025ರವರೆಗೂ ರೋಹಿತ್ ಶರ್ಮ ಭಾರತ ತಂಡದ ನಾಯಕ: ಜೈ ಶಾ ಸ್ಪಷ್ಟನೆ!

2025ರವರೆಗೂ ರೋಹಿತ್ ಶರ್ಮ ಭಾರತ ತಂಡದ ನಾಯಕ: ಜೈ ಶಾ ಸ್ಪಷ್ಟನೆ!

2025ರ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ವರೆಗೂ ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳಿಗೆ ರೋಹಿತ್ ಶರ್ಮ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.

ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ಇದರ ಬೆನ್ನಲ್ಲೇ ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ಮುಂದುವರಿಯುವ ಬಗ್ಗೆ ಸಾಕಷ್ಟು ವದಂತಿ ಹರಡಿತ್ತು. ಈ ವದಂತಿಗಳಿಗೆ ಜೈ ಶಾ ತೆರೆ ಎಳೆದಿದ್ದಾರೆ.

ಟಿ-20 ವಿಶ್ವಕಪ್ ನಲ್ಲಿ ಆಟಗಾರರ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿದ ಜೈ ಶಾ, ಮುಂದಿನ ವರ್ಷ ನಡೆಯಲಿರುವ ಎರಡು ಪ್ರತಿಷ್ಠಿತ ಟೂರ್ನಿಯಲ್ಲೂ ಭಾರತ ರೋಹಿತ್ ಶರ್ಮ ಸಾರಥ್ಯದಲ್ಲಿ ಪ್ರಶಸ್ತಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರೋಹಿತ್ ಶರ್ಮ ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ಕನಿಷ್ಠ ಮುಂದಿನ ವರ್ಷದ ಪ್ರತಿಷ್ಠಿತ ಟೂರ್ನಿಗಳು ಮುಗಿಯುವವರೆಗೂ ಇರುತ್ತಾರೆ ಎಂದು ಜೈ ಶಾ ಹೇಳಿದರು.

ಭಾರತ ತಂಡ 2023 ಏಕದಿನ ವಿಶ್ವಕಪ್ ನಲ್ಲಿ ಭಾರತ ಸತತ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೂ ಫೈನಲ್ ನಲ್ಲಿ ಸೋತು ಆಘಾತ ಅನುಭವಿಸಿತ್ತು. ಆಗ ನಾನು ಹೇಳಿದ್ದೆ. ನಾನು ಸೋತಿರಬಹುದು. ಆದರೆ ಜನರ ಹೃದಯ ಗೆದ್ದಿದ್ದೇವೆ ಎಂದು. ಈ ಬಾರಿ ಹೃದಯವನ್ನೂ ಗೆದ್ದೆವು, ಪ್ರಶಸ್ತಿಯನ್ನೂ ಗೆದ್ದೆವು ಎಂದು ಜೈ ಶಾ ಸಂತಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments