ನಟ ಕಮಲ್ ಹಾಸನ್ ಮತ್ತು ಶಂಕರ್ ಮತ್ತೆ ಜೊತೆಗೂಡಿ ಮಾಡಿರುವ ಇಂಡಿಯನ್-2 ಚಿತ್ರ ನಿಷೇಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಕೇರಳದ ಸಮರ ಕಲೆ ವರ್ಮಾ ಕಲೆಯನ್ನು ಸಿನಿಮಾದಲ್ಲಿ ಬಳಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಅಸನ್ ರಾಜೇಂದ್ರನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಇಂಡಿಯನ್ -2 ನಿಷೇಧಿಸುವಂತೆ ಮನವಿ ಮಾಡಿದ್ದಾರೆ.
ಮಧುರೆ ಜಿಲ್ಲಾ ಮ್ಯಾಜಿಸ್ಡ್ರೇಟ್ ಗೆ ಜುಲೈ 9ರಂದು ದೂರು ದಾಖಲಿಸಲಾಗಿದ್ದು, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಲಾಗಿದೆ.
1996ರಲ್ಲಿ ಇಂಡಿಯನ್ ಚಿತ್ರ ಬಿಡುಗಡೆ ಆಗಿದ್ದು, ಈ ಚಿತ್ರದಲ್ಲೂ ಕೇರಳದ ಸಮರ ಕಲೆ ಕಲೆ ವರ್ಮಾ ಬಳಸಲಾಗಿತ್ತು. ಇದೀಗ ಜುಲೈ 12ರಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿತ್ತು. ಇಂಡಿಯನ್-2 ನಂತರ ಇಂಡಿಯನ್ -3 ಮೂರನೇ ಭಾಗವೂ ಬರಲಿದೆ ಎಂದು ನಿರ್ದೇಶಕ ಶಂಕರ್ ಹೇಳಿದ್ದಾರೆ.