ತರಬೇತಿ ಅವಧಿಯಲ್ಲಿಯೇ ಸರ್ಕಾರದ ಕೆಂಪುದೀಪ ಹಾಕಿಕೊಂಡಿದ್ದ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಕಾರುನ್ನು ಜಫ್ತಿ ಮಾಡಲಾಗಿದೆ.
ಪೂಜಾ ಖೇಡ್ಕರ್ ಕೆಂಪು ದೀಪ ಬಳಸಿದ್ದ ಐಷಾರಾಮಿ ಆಡಿ ಕಾರನ್ನು ಪುಣೆ ಪೊಲೀಸರು ಜಫ್ತಿ ಮಾಡಿದ್ದಾರೆ.
ಪೂಜಾ ಖೇಡ್ಕರ್ ಕೆಂಪು ದೀಪ ಬಳಸಿದ್ದ ಕಾರಿನ ಮಾಹಿತಿ ನೀಡುವಂತೆ ಆರ್ ಟಿಓ ಕಚೇರಿಗೆ ಮನವಿ ಮಾಡಲಾಗಿದ್ದು, ಈ ಕಾರು ಹವೇಲಿ ತಾಲೂಕಿನ ಶಿವಾನಿ ಗ್ರಾಮದಲ್ಲಿ ನೋಂದಣಿ ಆಗಿದೆ ಎಂದು ತಿಳಿದು ಬಂದಿದ್ದು, ಕಾರನ್ನು ಪತ್ತೆ ಹಚ್ಚಿ ಜಫ್ತಿ ಮಾಡಲಾಗಿದೆಎಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ರೈತರಿಗೆ ಗನ್ ತೋರಿಸಿ ಬೆದರಿಸಿದ ಆರೋಪದ ಮೇಲೆ ಪೂಜಾ ಖೇಡ್ಕರ್ ತಾಯಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಪೂಜಾ ಖೇಡ್ಕರ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಕೆಂಪು ದೀಪ ಬಳಸಿದ್ದಕ್ಕಾಗಿ ವರ್ಗಾವಣೆಗೊಂಡಿದ್ದೂ ಅಲ್ಲದೇ ತರಬೇತಿ ಅವಧಿಯಲ್ಲೇ ಮನೆ ಬೇಕು, ಕಾರು ಬೇಕು ಎಂದು ಬೇಡಿಕೆ ಸಲ್ಲಿಸಿದ್ದೂ ಅಲ್ಲದೇ ಜಿಲ್ಲಾಧಿಕಾರಿ ಇಲ್ಲದ ವೇಳೆ ಕಚೇರಿಯ ಪೀಠೋಪಕರಣಗಳನ್ನು ಬದಲಿಸಿದ್ದರು.