ಜಗತ್ತಿನಾದ್ಯಂತ ಮೈಕ್ರೊಸಾಫ್ಟ್ ವಿಂಡೋಸ್ ಏಕಾಏಕಿ ಆಫ್ ಆಗಿ ಆನ್ ಆಗಿದ್ದು, ಕಂಪ್ಯೂಟರ್ ತೆರೆಯ ಮೇಲೆ ದಿಢೀರನೆ ನೀಲಿ ಡೆತ್ ಸ್ಕ್ರೀನ್ ಕಾಣಿಸಿಕೊಂಡಿದ್ದರಿಂದ ಗ್ರಾಹಕರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ಶುಕ್ರವಾರ ನಡೆದಿದೆ.
ಕ್ರೌಡ್ ಸ್ಟ್ರೈಕ್ ಅಪ್ ಡೇಟ್ ವೇಳೆ ವಿಂಡೋಸ್ ದಿಢೀರನೆ ಆಫ್ ಆಗಿದ್ದು, ಇದೀಗ ಪುನರಾರಂಭಗೊಂಡಿದೆ ಎಂದು ಮೈಕ್ರೊಸಾಫ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ವೈರಸ್ ನಿಂದ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಹಲವೆಡೆ ಬ್ಯಾಂಕ್, ಕಂಪನಿ ಹಾಗೂ ಸರ್ಕಾರಿ ಕಚೇರಿಗಳ ಕೆಲಸಕ್ಕೆ ಅಡ್ಡಿಯುಂಟಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ವಿಂಡೋಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ನೀಲಿ ಚಿತ್ರದ ಫೋಟೊ ತೆಗೆದು ಹಂಚಿಕೊಂಡಿದ್ದು, ಎಲ್ಲರೂ ತಮ್ಮ ಸಿಸ್ಟಮ್ ಆಫ್ ಮಾಡಿ ಆನ್ ಮಾಡಿದರೆ ಸರಿ ಹೋಗಬಹುದು ಎಂದು ಸಲಹೆ ನೀಡಿದ್ದಾರೆ.