Wednesday, 18 November 2026 — Kannadavahini
BREAKING NEWS
ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್
ತಂತ್ರಜ್ಞಾನ

ಯುದ್ಧ ವಿಮಾನ ಹಾರಾಟದ ವೇಳೆ ತುರ್ತು ನಿರ್ಗಮನದ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆ ಯಶಸ್ವಿ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 530 ವೀಕ್ಷಣೆಗಳು
eject

ಅತ್ಯಂತ ವೇಗದ ಯುದ್ಧ ವಿಮಾನ ತಪ್ಪಿಸಿಕೊಳ್ಳುವ ವ್ಯವಸ್ಥೆಯ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ತಂತ್ರಜ್ಞಾನ ಹೊಂದಿದ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ.

ಡಿಆರ್ ಡಿಒ ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ (TBRL) ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಿಂದ ಗಂಟೆಗೆ 800 ಕಿ.ಮೀ ವೇಗದಲ್ಲಿ ನಿಖರವಾಗಿ ನಿಯಂತ್ರಿತ ಚಲಿಸುವ ರೈಲಿನಲ್ಲಿ ಯುದ್ಧ ವಿಮಾನದ ಎಸ್ಕೇಪ್ ಸಿಸ್ಟಮ್‌ನ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

ಯುದ್ಧ ವಿಮಾನಗಳು ಅಪಘಾತಕ್ಕೀಡಾಗುವ ಸಂದರ್ಭದಲ್ಲಿ ಪೈಲೆಟ್ ಗಳು ಇಜೆಕ್ಟ್ ಮೂಲಕ ತಪ್ಪಿಸಿಕೊಳ್ಳುವ ತಂತ್ರಜ್ಞಾನ ಇದಾಗಿದ್ದು, ಭಾರತ ಈ ತಂತ್ರಜ್ಞಾನ ಅಭಿವೃದ್ಧಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿತು.

ಫೈಟರ್ ಜೆಟ್ ಎಸ್ಕೇಪ್ ಸಿಸ್ಟಮ್‌ನ ಹೈ-ಸ್ಪೀಡ್ ರಾಕೆಟ್ ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ, ಭಾರತೀಯ ವಾಯುಪಡೆ, ಎಡಿಎ, ಎಚ್‌ಎಎಲ್ ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ. ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯಗಳಿಗೆ ಇದು ಒಂದು ಪ್ರಮುಖ ಮೈಲಿಗಲ್ಲು. ಸ್ವಾವಲಂಬಿ ಭಾರತದತ್ತ ಮತ್ತೊಂದು ಬಲವಾದ ಹೆಜ್ಜೆ ಎಂದು ಸಚಿವ ಸಿಂಗ್ ಬಣ್ಣಿಸಿದ್ದಾರೆ.

ಡಿಆರ್‌ಡಿಒ ಅಧ್ಯಕ್ಷ ಡಾ.ಸಮೀರ್ ವಿ. ಕಾಮತ್ ಕೂಡ ಇಡೀ ತಂಡವನ್ನು ಶ್ಲಾಘಿಸಿದ್ದಾರೆ. ತೇಜಸ್‌ನಂತಹ ಯುದ್ಧ ವಿಮಾನಗಳು ಮತ್ತು ಮುಂಬರುವ ಎಎಂಸಿಎಗೆ ಇದು ಅತ್ಯಂತ ಅಗತ್ಯವಾದ ಪ್ರಗತಿ ಎಂದು ಹೇಳಿದ್ದಾರೆ.

ಪರೀಕ್ಷೆ ಹೇಗೆ ನಡೆಯಿತು?

ಶಕ್ತಿಯುತ ರಾಕೆಟ್ ಮೋಟಾರ್‌ಗಳನ್ನು ಬಳಸಿಕೊಂಡು ಯುದ್ಧ ವಿಮಾನದ ಮುಂಭಾಗವನ್ನು ಗಂಟೆಗೆ 800 ಕಿಲೋಮೀಟರ್ ವೇಗಕ್ಕೆ ಹೆಚ್ಚಿಸಲಾಯಿತು. ಈ ವೇಳೆ, ಪೈಲಟ್ ಸೀಟಿನ ಕ್ಯಾನೋಪಿ ಬೇರ್ಪಡಿಕೆ ಮತ್ತು ಎಜೆಕ್ಷನ್ ಸಂಪೂರ್ಣವಾಗಿ ಯಶಸ್ವಿಯಾಯಿತು. ಡಮ್ಮಿ ಪೈಲಟ್ ಅನ್ನು ವಿಮಾನದಿಂದ ಸುರಕ್ಷಿತವಾಗಿ ಹೊರಹಾಕುವಲ್ಲಿ ಇಡೀ ವ್ಯವಸ್ಥೆಯು 100% ಯಶಸ್ವಿಯಾಗಿದೆ. ಈ ಯಶಸ್ಸಿನೊಂದಿಗೆ ಭಾರತೀಯ ಪೈಲಟ್‌ಗಳ ಸುರಕ್ಷತೆಯು ಈಗ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮತ್ತು ಹೆಚ್ಚು ಪರೀಕ್ಷಿಸಲ್ಪಟ್ಟ ವ್ಯವಸ್ಥೆಯ ಕೈಯಲ್ಲಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8426 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment