ಭಾರತದ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎದುರಾಳಿ ವಿರುದ್ಧ ಗಳಿಸಿದ ಗೆಲುವಿನ ಅಂಕಗಳನ್ನು ಡಿಲಿಟ್ ಮಾಡಲಾಗಿದೆ.
ಶನಿವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಲ್ ಗುಂಪಿನ ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್ 21-8, 22-20 ನೇರ ಸೆಟ್ ಗಳಿಂದ ಗ್ವಾಟೆಮಾಲಾ ಸ್ಪರ್ಧಿ ವಿರುದ್ಧ ಗೆಲುವು ದಾಖಲಿಸಿದ್ದರು.
ಗ್ವಾಟೆಮಾಲಾ ಸ್ಪರ್ಧಿ ಕೆವಿನ ಕೊರ್ಡನ್ ಮಂಡಿ ನೋವಿನ ಕಾರಣ ಟೂರ್ನಿಯಿಂದ ಹಿಂದೆ ಸರಿದರು. ಕೆವಿನ್ ಕೊರ್ಡನ್ ಗುಂಪಿನ ಮತ್ತೊಂದು ಪಂದ್ಯದಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿಯನ್ ಮತ್ತು ಬೆಲ್ಜಿಯಂನ ಜೂಲಿಯನ್ ಕ್ಯಾರಗಿ ವಿರುದ್ಧ ಆಡಬೇಕಿತ್ತು.
ಇಬ್ಬರ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಫೆಡರೇಷನ್ ನಿಯಮದ ಪ್ರಕಾರ ಅವರು ಆಡಿದ ಏಕೈಕ ಪಂದ್ಯದ ಫಲಿತಾಂಶವನ್ನು ದಾಖಲೆಯಿಂದ ಡಿಲಿಟ್ ಮಾಡಲಾಗಿದೆ.
ಲಕ್ಷ್ಯ ಸೇನ್ ಅವರ ಪಂದ್ಯದ ಫಲಿತಾಂಶ ಲೀಗ್ ಹಂತದಲ್ಲಿ ಪರಿಗಣನೆಗೆ ಬರುವುದಿಲ್ಲ. ಅಲ್ಲದೇ ರ್ಯಾಂಕಿಂಗ್ ಆಧಾರಿತ ಪಂದ್ಯಗಳಾಗಿರುವುದರಿಂದ ಮುಂದಿನ ಪಂದ್ಯಗಳ ಗೆಲುವಿನ ಮೇಲೆ ಅವರ ಮುಂದಿನ ಹಂತಕ್ಕೆ ಹೋಗುವುದು ನಿರ್ಧಾರವಾಗಲಿದೆ.