Friday, November 22, 2024
Google search engine
Homeತಾಜಾ ಸುದ್ದಿಪ್ರಿಯಕರನಿಗಾಗಿ ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ: ವೀಡಿಯೊ ಕಾಲ್ ನಲ್ಲೇ ಮದುವೆ!

ಪ್ರಿಯಕರನಿಗಾಗಿ ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ: ವೀಡಿಯೊ ಕಾಲ್ ನಲ್ಲೇ ಮದುವೆ!

ಪ್ರೇಮಿಗಳು ಪ್ರೀತಿಯನ್ನು ಅರಸಿ ದೇಶಗಳ ಗಡಿ ದಾಟಿ ಹೋಗುವುದು, ಬರುವುದು ಇತ್ತೀಚಿನ ದಿನಗಳ ಸರ್ವೆ ಸಾಮಾನ್ಯವಾಗಿದೆ. ಅದರಲ್ಲೂ ಎರಡೂ ದೇಶಗಳ ನಡುವೆ ಬದ್ಧವೈರತ್ವ ಇದ್ದರೂ ಪ್ರೀತಿ ಈ ಎಲ್ಲಾ ಗಡಿಗಳನ್ನು ದಾಟಿ ಹೋಗುತ್ತಿವೆ.

ಹೌದು, ಇದಕ್ಕೆ ತಾಜಾ ಉದಾರಹಣೆ ಅಂತ 25 ವರ್ಷದ ಪಾಕಿಸ್ತಾನಿ ಮಹಿಳೆಯೊಬ್ಬಳು ಭಾರತದ ಗಡಿ ದಾಟಿ ರಾಜಸ್ಥಾನಕ್ಕೆ ಆಗಮಿಸಿ ಪ್ರಿಯಕರನನ್ನು ಭೇಟಿ ಮಾಡಿದ್ದು, ವೀಡಿಯೋ ಕಾಲ್ ನಲ್ಲೇ ಮದುವೆ ಆಗಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಪಾಕಿಸ್ತಾನದ ಇಸ್ಲಾಮಾಬಾದ್ ನಿವಾಸಿ ಆಗಿರುವ ಮಹಿಳೆ ಮಹ್ವಿಶ್ ಗೆ ಮದುವೆ ಆಗಿದ್ದು, ಎರಡು ಮಕ್ಕಳು ಸಹ ಇವೆ. 2018ರಲ್ಲಿ ಮದುವೆ ಮುರಿದುಬಿದ್ದಿತ್ತು. ಇದೇ ವೇಳೆ ರಾಜಸ್ಥಾನ ಬಿಕಾನೇರ್ ನಿವಾಸಿ ಆಗಿರುವ ರೆಹಮಾನ್ ಕುವೈತ್ ನಲ್ಲಿ ಟ್ರಾನ್ಸ್ ಪೋರ್ಟರ್ ಆಗಿ ಕೆಲಸಕ್ಕೆ ಸೇರಿದ್ದ.

ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಯ ಮಾಡಿಕೊಂಡ ಮಹ್ವಿಶ್ ಮತ್ತು ರೆಹಮಾನ್ ಚಾಟ್ ಮಾಡುವ ಮೂಲಕ ಹತ್ತಿರ ಆದರು. 2022, ಮಾರ್ಚ್ 22ರಂದು ಮದುವೆ ಪ್ರಸ್ತಾಪ ಆಗಿದ್ದು, ಮೂರೇ ದಿನದಲ್ಲಿ ವೀಡಿಯೊ ಕಾನ್ವರೆನ್ಸ್ ಮೂಲಕ ಮದುವೆ ಆಗಿದ್ದಾರೆ.

2023ರಲ್ಲಿ ಮೆಹ್ವಿಶ್‌ ಉಮ್ರಾ ತೀರ್ಥಯಾತ್ರೆ ಕೈಗೊಂಡಿದ್ದು, ಮೆಕ್ಕಾದಲ್ಲಿ ಇಬ್ಬರೂ ಔಪಚಾರಿಕ ಭೇಟಿ ಮಾಡಿದ್ದೂ ಅಲ್ಲದೇ ಅಧಿಕೃತವಾಗಿ ಮದುವೆ ಆದರು.

ಮೆಹ್ವಿಶ್ ಈ ಹಿಂದೆ ಲಾಹೋರ್‌ನ ಬಾದಾಮಿ ಬಾಗ್‌ನ ಪಾಕಿಸ್ತಾನಿ ವ್ಯಕ್ತಿಯೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 12 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದು, 2018ರಲ್ಲಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರ ರೆಹಮಾನ್‌ ಸ್ನೇಹ ಬೆಳೆಸಿದ ಮೆಹ್ವಿಶ್ ನಂತರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದಾಗ ಮೊದಲು ವೀಡಿಯೊ ಕಾನ್ಫರೆನ್ಸ್ ಮೂಲಕ ಮತ್ತು ನಂತರ ವೈಯಕ್ತಿಕವಾಗಿ ಮದುವೆಯಾದಳು.

ಜುಲೈ 25ರಂದು ಇಸ್ಲಾಮಾಬಾದ್‌ನಿಂದ ಲಾಹೋರ್‌ ಮರಳಿದ ಮಹ್ವಿಶ್, ವಾಘಾ ಗಡಿಯ ಮೂಲಕ ಭಾರತದ ಗಡಿ ದಾಟಿ ಬಂದಿದ್ದು, ಪಾಕಿಸ್ತಾನಿ ಮತ್ತು ಭಾರತೀಯ ಅಧಿಕಾರಿಗಳು ಮಾಡಿದ ಸಂಪೂರ್ಣ ದಾಖಲೆ ಪರಿಶೀಲನೆಯ ನಂತರ 45 ದಿನಗಳ ಪ್ರವಾಸಿ ವೀಸಾ ಮೂಲಕ ರಾಜಸ್ಥಾನಕ್ಕೆ ಭೇಟಿ ನೀಡಿ ಪತಿಯನ್ನು ಸೇರಿದ್ದಾರೆ. ಮೆಹ್ವಿಶ್ ಅವರನ್ನು ರೆಹಮಾನ್ ಕುಟುಂಬದವರು ಸ್ವಾಗತಿಸಿದ್ದು, ರಾಜಸ್ಥಾನದ ಚುರುವಿನ ಪಿತಿಸರ್ ಗ್ರಾಮಕ್ಕೆ ತೆರಳಿದ್ದಾರೆ.

ಇತ್ತೀಚಿನ ಗಡಿ ದಾಟಿ ಪ್ರೇಮಿಗಳನ್ನು ಭೇಟಿ ಮಾಡಿ ಮದುವೆ ಆಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಇತ್ತೀಚೆಗೆ ಸೀಮಾ ಹೈದರ್ ತನ್ನ ಪತಿಯನ್ನು ತೊರೆದು ತನ್ನ ಪ್ರೇಮಿಯನ್ನು ಭೇಟಿಯಾಗಲು ಭಾರತಕ್ಕೆ ಬಂದು ಮದುವೆ ಆಗಿ ಇಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಅಂಜು ಎಂಬ ಭಾರತೀಯ ಮಹಿಳೆ ತನ್ನ ಪ್ರೇಮಿ ನಸ್ರುಲ್ಲಾಳೊಂದಿಗೆ ಇರಲು ತಿಂಗಳ ಅವಧಿಯ ವೀಸಾದಲ್ಲಿ ಪಾಕಿಸ್ತಾನಕ್ಕೆ ಬಂದ ಪ್ರಕರಣವೂ ಗಮನ ಸೆಳೆಯಿತು.

21 ವರ್ಷದ ಭಾರತೀಯ ಪ್ರಜೆ ಮುಲಾಯಂ ಸಿಂಗ್ ಯಾದವ್, ತನ್ನ 19 ವರ್ಷದ ಪಾಕಿಸ್ತಾನಿ ಪತ್ನಿ ಇಕ್ರಾ ಜೀವನಿಗೆ ನಕಲಿ ಐಡಿ ಪಡೆಯಲು ಮತ್ತು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಸಹಾಯ ಮಾಡಿದ. ಆನ್‌ಲೈನ್‌ನಲ್ಲಿ ಲೂಡೋ ಆಡುವಾಗ ಇಬ್ಬರೂ ಸ್ನೇಹ ಬೆಳೆಸಿದ್ದರು ಮತ್ತು ಪ್ರೀತಿಸುತ್ತಿದ್ದರು. ಆದಾಗ್ಯೂ, ಭಾರತೀಯ ಅಧಿಕಾರಿಗಳು ಬಂಧಿಸಿದ ನಂತರ, ಇಕ್ರಾ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು ಮತ್ತು ಮುಲಾಯಂ ಅವರನ್ನು ಬಾರ್‌ಗಳ ಹಿಂದೆ ಇರಿಸಲಾಯಿತು ಮತ್ತು ವಂಚನೆಯ ಆರೋಪ ಹೊರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments