Thursday, September 19, 2024
Google search engine
HomeUncategorizedಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ

ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ

ದ್ವೀಪರಾಷ್ಟ್ರ ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, 8 ಮಂದಿ ಗಾಯಗೊಂಡಿದ್ದಾರೆ.

ಗುರುವಾರ ತಡರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ಸಾಮಾನ್ಯ ಭೂಕಂಪನಕ್ಕಿಂತ ಇದು ದೊಡ್ಡ ಪ್ರಮಾಣದ ಭೂಕಂಪನವಾಗಿದೆ ಎಂದು ಭೂವಿಜ್ಞಾನ ತಜ್ಞರು ಹೇಳಿದ್ದಾರೆ.

2011ರ ನಂತರ ಸಂಭವಿಸಿದ ರಿಕ್ಟರ್ ಮಾಪಕದಲ್ಲಿ ದಾಖಲಾದ ದೊಡ್ಡ ಭೂಕಂಪನದ ಪ್ರಮಾಣ ಇದಾಗಿದೆ. ಭೂಕಂಪನದಿಂದ ಹಲವಾರು ಕಟ್ಟಡಗಳು ಧರೆಗುರುಳಿವೆ. ಸಾವು-ನೋವಿನ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದರೂ 8 ಮಂದಿ ಗಾಯಗೊಂಡಿರುವುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್ ನಲ್ಲಿ ಭೂಕಂಪನ ಸಾಮಾನ್ಯವಗಿದ್ದು, ಇಲ್ಲಿನ ಜನ ವರ್ಷದಲ್ಲಿ ಸುಮಾರು 1500 ಬಾರಿ ಭೂಕಂಪನದ ಅನುಭವ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ಪ್ರಬಲ ಭೂಕಂಪನ ಸಂಭವಿಸಬಹುದು ಎಂದು ಮುನ್ನೆಚ್ಚರಿಕೆ ನೀಡಿ ಜನರನ್ನು ಜಾಗೃತಗೊಳಿಸಿದ್ದರು.

2011ರಲ್ಲಿ 9.0 ತೀವ್ರತೆಯಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ 18,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಕಳೆದ ಜನವರಿಯಲ್ಲಿ ಸಂಭವಿಸಿದ 7.6 ತೀವ್ರತೆಯ ಭೂಕಂಪನದಲ್ಲಿ 318 ಮಂದಿ ಅಸುನೀಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments