Monday, November 25, 2024
Google search engine
HomeUncategorizedತುಂಗಾಭದ್ರೆ ಪೂರ್ತಿ ಭದ್ರ: 3ನೇ ಸ್ಟಾಪ್ ಲಾಗ್ ಗೇಟ್ ಯಶಸ್ವಿ ಅಳವಡಿಕೆ!

ತುಂಗಾಭದ್ರೆ ಪೂರ್ತಿ ಭದ್ರ: 3ನೇ ಸ್ಟಾಪ್ ಲಾಗ್ ಗೇಟ್ ಯಶಸ್ವಿ ಅಳವಡಿಕೆ!

ತುಂಗಭದ್ರಾ ಜಲಾಶಯದ ಮೂರನೇ ಸ್ಟಾಪ್‌ ಲಾಗ್‌ ಗೇಟ್ ಯಶಸ್ವಿಯಾಗಿ ಅಳವಡಿಸುವ ಮೂಲಕ ಹರಿದು ಹೋಗುತ್ತಿದ್ದ ನದಿ ನೀರಿಗೆ ಕಡಿವಾಣ ಹಾಕಲಾಗಿದೆ.

ವಿಜಯನಗರದ ಹೊಸಪೇಟೆಯಲ್ಲಿರುವ ಜಲಾಶಯದಲ್ಲಿ ವಾರದ ಹಿಂದೆ ಮೂರನೇ ಸ್ಟಾಪ್ ಗೇಟ್ ಕೊಂಡಿ ಕಳಚಿದ್ದರಿಂದ ಜಲಾಶಯದ ನೀರು ಹರಿದು ಹೋಗುತ್ತಿತ್ತು. ಶುಕ್ರವಾರ ರಾತ್ರಿ ಗೇಟ್ ನ ಒಂದು ಭಾಗವನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು. ಶನಿವಾರ ಸಂಜೆ ವೇಳೆಗೆ ಉಳಿದ ಗೇಟ್ ಭಾಗವನ್ನು ಯಶಸ್ವಿಯಾಗಿ ಅಳವಡಿಸಲಾಯಿತು.

ಇದೀಗ ತುಂಗಾಭದ್ರ ಗೇಟ್ ನ ಎಲ್ಲಾ 32 ಗೇಟ್ ಗಳನ್ನು ಬಂದ್ ಮಾಡಲಾಗಿದ್ದು, ಹರಿದು ಹೋಗುತ್ತಿದ್ದ ನೀರಿಗೆ ಕಡಿವಾಣ ಹಾಕಲಾಗಿದೆ. ಇದರಿಂದ ಸುಮಾರು 70 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ರೈತರು ಹಾಗೂ ಸರ್ಕಾರ ನಿಟ್ಟುಸಿರುಬಿಡುವಂತಾಗಿದೆ.

ಕೇವಲ ಗೇಟ್‌ 19 ರಿಂದ ಅಲ್ಪ ಪ್ರಮಾಣದ ನೀರು ಮಾತ್ರ ಹೊರ ಹೋಗುತ್ತಿದೆ. ಸದ್ಯ 70 ಟಿಎಂಸಿ ನೀರು ಜಲಾಶಯದಲ್ಲಿದೆ. 105 ಟಿಎಂಸಿ ನೀರು ನಿಲ್ಲಿಸಲು ಐದು ಸ್ಟಾಪ್‌ ಗೇಟ್‌ಗಳನ್ನು ಅಳವಡಿಲು ಟಿಬಿ ಬೋರ್ಡ್‌ ಮುಂದಾಗಿದ್ದು ಇಂದು ಅಥವಾ ನಾಳೆ ಸಂಪೂರ್ಣ ಗೇಟ್ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ.

1,633 ಅಡಿ ಎತ್ತರದ ಜಲಾಶಯದಲ್ಲಿ ಈಗ  1625 ಅಡಿ ನೀರು ಸಂಗ್ರಹವಾಗಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 72 ಟಿಎಂಸಿ ನೀರು ಸಂಗ್ರಹವಾಗಿದೆ. 84,796 ಕ್ಯೂಸೆಕ್ ಒಳಹರಿವು ಇದೆ.

19ನೇ ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿದ್ದರಿಂದ ಒಟ್ಟು ಐದು ಗೇಟ್‌ ಅಳವಡಿಸುವ ಕಾರ್ಯ ಆರಂಭವಾಗಿದೆ. ಶುಕ್ರವಾರ ರಾತ್ರಿ ಮೊದಲ ಸ್ಟಾಪ್‌ಗೇಟ್‌ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments