ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಜಾವೆಲಿನ್ ಸ್ಪರ್ಧಿ ಮೌಲ್ಯ 330 ಕೋಟಿ ರೂ.ಗೆ ಭಾರೀ ಜಿಗಿತ ಕಂಡರೆ, ಡಬಲ್ ಪದಕ ವಿಜೇತೆ ಶೂಟರ್ ಮನು ಭಾಕರ್ ಮೌಲ್ಯ ಕೋಟಿಗೆ ಏರಿಕೆಯಾಗಿದೆ.
ದೇಶದಲ್ಲಿ ಕ್ರಿಕೆಟಿಗರಿಗೆ ಮಾತ್ರ ಇದ್ದ ಬ್ರ್ಯಾಂಡ್ ಮೌಲ್ಯ ನಂತರ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಅವರಿಂದ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ವಿಸ್ತರಣೆ ಆಗಿತ್ತು. ಇದೀಗ ಇತರ ಕ್ರೀಡೆಗಳಿಗೂ ವಿಸ್ತಾರಗೊಂಡಿದ್ದು, ದೇಶದಲ್ಲಿ ಇತರೆ ಕ್ರೀಡಾಪಟುಗಳು ಕೂಡ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.
ಟೊಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ನೀರಜ್ ಚೋಪ್ರಾ ಈ ಬಾರಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರು. ಆದರೂ ಭಾರತ ತಂಡದ ಪರ ಬೆಳ್ಳಿ ಪದಕ ಗೆದ್ದ ಏಕೈಕ ಕ್ರೀಡಾಪಟು ಎನಿಸಿಕೊಂಡರು.
ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್ ಗೆ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅವರ ಬ್ರ್ಯಾಂಡ್ ಮೌಲ್ಯ 330 ಕೋಟಿ ರೂ. ಆಗಿದೆ. ಇದು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಬ್ರ್ಯಾಂಡ್ ಮೌಲ್ಯಕ್ಕಿಂತ ಹೆಚ್ಚಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 2 ಕಂಚಿನ ಪದಕ ಗೆದ್ದು ಇತಿಹಾಸ ಬರೆದ 22 ವರ್ಷದ ಮನು ಭಾಕರ್ ಬ್ರ್ಯಾಂಡ್ ಮೌಲ್ಯ 1.5 ಕೋಟಿ ರೂ.ಗೆ ಏರಿಕೆಯಾಗಿದೆ. ಮನು ಬಾಕರ್ ಥಂಬ್ಸಪ್ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಗೂ ಮುನ್ನ ಮನು ಬಾಕರ್ ಬ್ರ್ಯಾಂಡ್ ಮೌಲ್ಯ 25 ಲಕ್ಷ ರೂ. ಆಗಿತ್ತು. ಇದೀಗ ಅವರ ಜಾಹಿರಾತುಗಳಲ್ಲಿ ಪಡೆಯುವ ಸಂಭಾವನೆ ಮೊತ್ತ ಕೋಟಿಗೆ ಏರಿಕೆಯಾಗಿದೆ.
ಫೈನಲ್ ತಲುಪಿದರೂ ತೂಕದ ಸಮಸ್ಯೆಯಿಂದಾಗಿ ಪದಕ ಗೆಲ್ಲುವಲ್ಲಿ ವಿಫಲರಾದ ಕುಸ್ತಿಪಟು ವಿನೇಶ್ ಪೊಗಟ್ ಬ್ರ್ಯಾಂಡ್ ಮೌಲ್ಯ ಕೂಡ ಅಚ್ಚರಿ ಎಂಬಂತೆ ಹೆಚ್ಚಳವಾಗಿದೆ. ಕ್ರೀಡಾಕೂಟಕ್ಕೂ ಮುನ್ನ ಅವರ ಬ್ರ್ಯಾಂಡ್ ಮೌಲ್ಯ 25 ಲಕ್ಷ ರೂ. ಆಗಿದ್ದು, ಇದೀಗ 1 ಕೋಟಿ ರೂ.ಗೆ ಏರಿಕೆಯಾಗಿದೆ.