ಕರ್ನಾಟಕದ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರನ್ನು ಐಪಿಎಲ್ ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಸಾರ್ವಜನಿಕವಾಗಿ ಮಾಲೀಕ ಗೋಯೆಂಕಾ ನಿಂದಿಸಿದ ವೀಡಿಯೋ ವೈರಲ್ ಆದ ನಂತರ ಆಡಳಿತ ಮಂಡಳಿ ತೇಪೆ ಹಾಕಲು ಸಾಕಷ್ಟು ಪ್ರಯತ್ನಿಸಿತ್ತು. ಆದರೆ ಮಾಲೀಕರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅವರನ್ನು ಮುಂದಿನ ಐಪಿಎಲ್ ಆವೃತ್ತಿಗೆ ಮುಂದುವರಿಸುವ ಸಾಧ್ಯತೆ ಕಡಿಮೆ ಆಗಿದೆ. ಕೆಎಲ್ ರಾಹುಲ್ ಗೆ ನಾಯಕ ಸ್ಥಾನದಿಂದ ಕೊಕ್ ನೀಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಕೆಎಲ್ ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ತಂಡದಲ್ಲಿ ಉಳಿದುಕೊಂಡರೂ ನಾಯಕ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದು ಹೇಳಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಕೃನಾಲ್ ಪಾಂಡೆ ಅಥವಾ ವೆಸ್ಟ್ ಇಂಡೀಸ್ ನ ನಿಕೊಲಸ್ ಪೂರನ್ ಅವರನ್ನು ನಾಯಕ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಂಡದ ಮೂಲಗಳು ಹೇಳಿವೆ.
ಫಾರ್ಮ್ ಕೊರತೆ ಹಾಗೂ ಗಾಯದ ಸಮಸ್ಯೆಗಳಿಂದ ರಾಹುಲ್ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದು, ಈಗಾಗಲೇ ನೆಟ್ ಅಭ್ಯಾಸ ಆರಂಭಿಸಿರುವ ರಾಹುಲ್ ಭಾರತ ಎ ತಂಡದಲ್ಲಿ ಆಡುವ ಸಾಧ್ಯತೆ ಇದೆ.