ಜೀವನ ಶೈಲಿ ಬದಲಿಸಿಕೊಂಡರೆ ಎಂತಹ ಕಾಯಿಲೆ ಬೇಕಾದರೂ ಓಡಿಸಬಹುದು ಎಂಬುದನ್ನು ಅಮೆರಿಕದ ವೃದ್ಧರೊಬ್ಬರು ಸಾಧಿಸಿದ ತೋರಿಸಿದ್ದಾರೆ.
ಕನ್ಸಾಸ್ ನಿವಾಸಿಯಾಗಿರುವ 71 ವರ್ಷದ ವೃದ್ಧರೊಬ್ಬರು ವಂಶವಾಹಿನಿಯಾಗಿ ಬಂದ ಮರೆವಿನ ಕಾಯಿಲೆಯಿಂದ ಜೀವನ ಶೈಲಿ ಬದಲಿಸಿಕೊಳ್ಳುವ ಮೂಲಕ ಗುಣಮುಖರಾಗಿ ವೈದ್ಯ ಲೋಕಕ್ಕೆ ವಿಸ್ಮಯರಾಗಿದ್ದಾರೆ. ಈ ವಿಷಯ ಮೆಡಿಕಲ್ ಜನರಲ್ ಪತ್ರಿಕೆ ವರದಿ ಮಾಡಿದೆ.
71 ವರ್ಷದ ಮೈಕ್ ಕಾರ್ವರ್ ವೃದ್ಧಾಪ್ಯದಲ್ಲಿ ಬರುವ ಮರೆವಿನ ಕಾಯಿಲೆಯನ್ನು ವಂಶ ಪಾರಂಪರ್ಯವಾಗಿ ಬಳುವಳಿಯಾಗಿ ಪಡೆದಿದ್ದರು. ಆರಂಭಿಕ ಹಂತದಲ್ಲೇ ಇದು ಪತ್ತೆಯಾಗಿದ್ದು, ನಂತರ ಹಂತ ಹಂತವಾಗಿ ವೃದ್ಧಿಯಾಗಿ ಸಂಪೂರ್ಣ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು.
2017ರಲ್ಲಿ ಮೈಕ್ ಕಾರ್ವರ್ ಗೆ ನೆನಪಿನ ಶಕ್ತಿ ಕಳೆದುಕೊಳ್ಳುವ (Alzheimers) ಕಾಯಿಲೆ ಕಾಣಿಸಿಕೊಂಡಿತ್ತು. ಪತ್ನಿಗೆ ಈ ವಿಷಯ ತಿಳಿಸಿದ ಮೈಕ್ ಕಾರ್ವರ್, ಇಂಟರ್ನೆಟ್ ನಲ್ಲಿ ಈ ಕಾಯಿಲೆ ಕಡಿಮೆ ಮಾಡುವ ಯಾವುದಾದರೂ ಔಷಧ ಅಥವಾ ವಿಧಾನ ಇದೆಯೇ ಎಂದು ಪರಿಶೀಲಿಸಲು ಸೂಚಿಸಿದರು.
ಇಂಟರ್ನೆಟ್ ನಲ್ಲಿ ಸಿಕ್ಕ ಮಾಹಿತಿ ಪ್ರಕಾರ ಅವರು ಜೀವನಶೈಲಿ ಬದಲಿಸಿಕೊಳ್ಳಲು ಆರಂಭಿಸಿದರು. ಸಾಧ್ಯವಾದಷ್ಟು ದಿನ ಪತ್ನಿ ಜೊತೆ ಕಳೆಯಬೇಕು ಎಂಬ ಆಸೆ ಜೀವನ ಶೈಲಿ ಬದಲಾವಣೆಗೆ ಕಾರಣವಾಯಿತು.
ಸಾಮಾನ್ಯವಾಗಿ ನಾನು ಮಾಂಸಹಾರ ಸೇವಿಸುತ್ತಿದ್ದೆ. ಜೀವನದುದ್ದಕ್ಕೂ ನಾನು ಪ್ರತಿ ದಿನ ಎಂಬಂತೆ ಮಾಂಸಹಾರ ಸೇವಿಸುತ್ತಿದ್ದೆ. ನಂತರ ಅದನ್ನು ತ್ಯಜಿಸಿದೆ. ನಂತರ ನನ್ನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು ಎಂದು ಕಾರ್ನರ್ ಹೇಳಿಕೊಂಡಿದ್ದಾರೆ.
ಪತಿ ಜೀವನಶೈಲಿ ಬದಲಿಸಿಕೊಂಡಿದ್ದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕೂಡ ಗಮನಿಸಿದರು. ಅದರಲ್ಲೂ ಏನಾದರೂ ಹೇಳಿದರೆ ಕೇಳಿದ ಪ್ರಶ್ನೆಯನ್ನೇ ಪದೇಪದೆ ಕೇಳುವುದನ್ನು ನಿಲ್ಲಿಸಿದ್ದರು ಎಂದು ಪತ್ನಿ ಹೇಳಿದ್ದಾರೆ.