ಮಳೆ, ಭಾರೀ ಮಳೆ, ಕುಂಭದ್ರೋಣ ಮಳೆ, ಚಂಡಮಾರುತು, ಸುನಾಮಿ ಏನೇನೋ ಕೇಳಿದ್ದೀರಿ. ಆದರೆ ಈ ಬಾರಿ ಅಮೆರಿಕದ ಕ್ಯಾಲಿಫೋರ್ನಿಯಾದ ಮೇಲೆ ಇದೇ ಮೊದಲ ಬಾರಿ ಎನ್ನಲಾದ ಬಾಂಬ್ ಚಂಡಮಾರುತ ಅಪ್ಪಳಿಸಲಿದೆ.
ಹೌದು, ಇತಿಹಾಸದಲ್ಲಿ ಮೊದಲ ಬಾರಿ ಒಂದೇ ಬಾರಿಗೆ ಮೂರು ಚಂಡಮಾರುತದಿಂದ ತತ್ತರಿಸಿದ್ದ ಅಮೆರಿಕದಲ್ಲಿ ಇದೀಗ ಬಾಂಬ್ ಚಂಡಮಾರುತ ಅಪ್ಪಳಿಸಿದೆ.
ಚಂಡಮಾರುತ ಅಂದರೆ ಸಾಮಾನ್ಯವಾಗಿ 90 ಕಿ.ಮೀ. ನಿಂದ 150 ಕಿ.ಮೀ. ವೇಗದಲ್ಲಿ ಗಾಳಿ ಮಳೆ ಅಬ್ಬರದಿಂದ ಎಲ್ಲಾ ಕೊಚ್ಚಿಕೊಂಡು ಹೋಗುತ್ತದೆ. ಆದರೆ ಬಾಂಬ್ ಚಂಡಮಾರುತ ಒಂದೇ ಕಡೆ ಒಂದೇ ದಿನದಲ್ಲಿ ಕಂಡು ಕೇರಳಿಯದಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಲಿದೆ.
ಸಾಮಾನ್ಯವಾಗಿ ಬಾಂಬ್ ಒಂದು ಕಡೆ ಬಿದ್ದಾಗ ಆ ಪ್ರದೇಶವೆಲ್ಲಾ ಹೇಗೆ ಧ್ವಂಸವಾಗುತ್ತದೋ ಅದೇ ಮಾದರಿಯಲ್ಲಿ ಒಂದೇ ಬಾರಿಗೆ ಧೋತ್ತನೆ ಮೋಡವೇ ಕಳಚಿ ಬಿದ್ದಂತೆ ಭಾರೀ ಮಳೆಯಾಗಲಿದೆ. ಅಂದರೆ ಒಂದು ದೊಡ್ಡ ಬೆಟ್ಟವೇ ಮೈಮೇಲೆ ಬೀಳಲಿದೆ. ಈ ಮಳೆ ಪ್ರಮಾಣ ಅಂದಾಜಿಸುವುದು ಕಷ್ಟವಾದರೂ ಹವಾಮಾನ ಇಲಾಖೆ ಪ್ರಕಾರ 8 ಟ್ರೆಲಿಯನ್ ಗ್ಯಾಲೋನ್ ಮಳೆಯಾಗಲಿದೆ.
ಪಶ್ಚಿಮ ಕರಾವಳಿ ಭಾಗದಲ್ಲಿ ಈ ಬಾಂಬ್ ಚಂಡಮಾರುತ ಅಪ್ಪಳಿಸಲಿದ್ದು, ಇದು ೫ ಬೃಹತ್ ಕೆರೆಗಳಿಗೆ ಸಮವಾಗಿರುತ್ತದೆ. ಹಿಮಾಪತ ಮಾದರಿಯ ಮಳೆ ಜೊತೆಗೆ ಭಾರೀ ಗಾಳಿ ಇರುವುದರಿಂದ ಮಳೆಯಾಗುವ ಜಾಗದಲ್ಲಿ ಏನೂ ಉಳಿಯುವುದು ಅನುಮಾನ. ಬಾಂಬ್ ಚಂಡಮಾರುತ ಸೃಷ್ಟಿಸುವ ಪ್ರವಾಹ ಎಷ್ಟು ವಿಧ್ವಂಸಕಾರಿ ಅಂದರೆ ಅಮೆರಿಕದ ಸುಮಾರು ೫ ರಾಜ್ಯಗಳಲ್ಲಿ ಏನೂ ಉಳಿಸದಂತೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ.