Friday, November 22, 2024
Google search engine
Homeತಾಜಾ ಸುದ್ದಿಬಿಹಾರದಲ್ಲಿ ಉದ್ಘಾಟನೆಗೂ ಮುನ್ನವೇ ಕುಸಿದ 12 ಕೋಟಿ ವೆಚ್ಚದ ಸೇತುವೆ!

ಬಿಹಾರದಲ್ಲಿ ಉದ್ಘಾಟನೆಗೂ ಮುನ್ನವೇ ಕುಸಿದ 12 ಕೋಟಿ ವೆಚ್ಚದ ಸೇತುವೆ!

ಬಾಕ್ರಾ ನದಿ ಮೇಲೆ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ ಘಟನೆ ಬಿಹಾರದಲ್ಲಿ ಸಂಭವಿಸಿದೆ.

ಅರೆರಿಯಾ ಜಿಲ್ಲೆಯ ಕುರ್ಸಕಾಂತಾ ಮತ್ತು ಸಿಕ್ತಿ ಗ್ರಾಮಗಳ ನಡುವೆ ಬಾಕ್ರಾ ನದಿ ಮೇಲೆ ಸೀಮೆಂಟ್ ಕಾಂಕ್ರಿಟ್ ಅಳವಡಿಸಿದ ಸೇತುವೆ ನಿರ್ಮಿಸಲಾಗುತ್ತಿತ್ತು. ನದಿಯಲ್ಲಿ ನೀರಿನ ವೇಗಕ್ಕೆ ಅಲುಗಾಡುತ್ತಿದ್ದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ.

ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಿಹಾರ ಸರ್ಕಾರದ ಕಾಮಗಾರಿಗಳ ಬಗ್ಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುವಂತಾಗಿದೆ.

ಸೇತುವೆ ನಿರ್ಮಾಣ ಕಾಮಗಾರಿ ಜವಾಬ್ದಾರಿ ಹೊತ್ತಿದ್ದ ಕಂಪನಿಯ ಬೇಜವಾಬ್ದಾರಿಯಿಂದ ಸೇತುವೆ ಕುಸಿದು ಬಿದ್ದಿದ್ದು, ಸರ್ಕಾರ ಕೂಡಲೇ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಶಾಸಕ ವಿಜಯ್ ಕುಮಾರ್ ಆರೋಪಿಸಿದ್ದಾರೆ.

ಸೇತುವೆ ಕುಸಿಯುತ್ತಿದ್ದಂತೆ ಜನರು ಓಡಿ ಹೋಗಿದ್ದಾರೆ. ನೀರಿನ ರಭಸಕ್ಕೆ ಕಾಂಕ್ರಿಟ್ ತುಂಡುಗಳು ಕೊಚ್ಚಿ ಹೋಗುತ್ತಿದ್ದು, ಕಾಮಗಾರಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments