Thursday, November 21, 2024
Google search engine
Homeಅಪರಾಧಮದುವೆ ಆಗಲು ಒತ್ತಡ ಹೇರಿದ ಗರ್ಭಿಣಿಯನ್ನು ಹತ್ಯೆಗೈದ ಪ್ರಿಯಕರ!

ಮದುವೆ ಆಗಲು ಒತ್ತಡ ಹೇರಿದ ಗರ್ಭಿಣಿಯನ್ನು ಹತ್ಯೆಗೈದ ಪ್ರಿಯಕರ!

ಗರ್ಭಿಣಿಯಾಗಿದ್ದ ಪ್ರೇಯಸಿ ಮದುವೆ ಆಗುವಂತೆ ಒತ್ತಡ ಹೇರಿದ್ದಕ್ಕೆ ಆಕೆಯನ್ನು ಪ್ರಿಯಕರ ಕೊಲೆಗೈದು ಸುಟ್ಟು ಹಾಕಿದ ಆಘಾತಕಾರಿ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ನಂಗೋಲಿಯ ನಿವಾಸಿಯಾಗಿದ್ದ 19 ವರ್ಷದ ಸೋನಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲೆಯಾಗಿದ್ದು, 6000ಕ್ಕೂ ಹೆಚ್ಚು ಫಾಲೋಫರ್ಸ್ ಹೊಂದಿದ್ದಳು. ಅಲ್ಲದೇ ಗೆಳೆಯ ಸಂಜು ಅಲಿಯಾಸ್ ಸಲೀಂ ಜೊತೆಗಿರುವ ಫೋಟೊ ಹಾಗೂ ವೀಡೀಯೊಗಳನ್ನು ಪೋಸ್ಟ್ ಮಾಡುತ್ತಿದ್ದಳು.

ಸೋನಿ ಗರ್ಭಿಣಿಯಾಗಿದ್ದು ಮದುವೆ ಆಗುವಂತೆ ಒತ್ತಡ ಹೇರಿದ್ದಾರೆ. ಆದರೆ ಮದುವೆ ಆಗಲು ನಿರಾಕರಿಸಿದ ಸಂಜು ಗರ್ಭಪಾತ ಮಾಡಿಸಿಕೊಳ್ಳುವಂತೆ ಸೂಚಿಸಿದ್ಧಾನೆ. ಆದರೆ ಸೋನಿ ಇದಕ್ಕೆ ಒಪ್ಪಿರಲಿಲ್ಲ ಎಂದು ತಿಳಿದು ಬಂದಿದೆ.

ಸೋನಿ ಕುಟುಂಬ ಸೋನಿ ಹುಡುಗನ ಜೊತೆ ಓಡಾಡುತ್ತಿರುವುದು ತಿಳಿದು ಆತ ಯಾರು ಎಂದು ಪ್ರಶ್ನಿಸಿದಾಗ ಆಕೆ ಸಂಜು ಹೆಸರನ್ನು ಗೌಪ್ಯ ಇರಿಸಿದ್ದಾರೆ.

ಸೋನಿ 9 ತಿಂಗಳ ಗರ್ಭಿಣಿಯಾಗಿದ್ದು, ಸಂಜು ಭೇಟಿ ಮಾಡಿ ಮದುವೆ ಮಾತುಕತೆ ನಡೆಸಲು ಮನೆಯ ಕೆಲವು ವಸ್ತುಗಳ ಜೊತೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಿಯನ್ನು ಹರಿಯಾಣದ ರೋಹ್ಟಕ್ ಗೆ ಸಂಜು ಹಾಗೂ ಆತನ ಸ್ನೇಹಿತರು ಕರೆದುಕೊಂಡಿದ್ದಾರೆ. ಅಲ್ಲಿ ಆಕೆಯನ್ನು ಕೊಂದು ದೇಹವನ್ನು ಸುಟ್ಟು ಹಾಕಿದ್ದಾರೆ. ಸಂಜು ಹಾಗೂ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು, ಇತರರಿಗಾಗಿ ಶೋಧ ಕಾರ್ಯ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments