ವಿವಾಹಿತ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದರೆ ಅದು ಅಪರಾಧವಲ್ಲ. ನೈತಿಕತೆ ಕುರಿತು ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಉತ್ತರ ಪ್ರದೇಶದ ಶಹಜಾನ್ ಪುರದಲ್ಲಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ದಂಪತಿ ವಿರುದ್ಧ ದಾಖಲಾದ ಮೊಕದ್ದಮೆ ವಿಚಾರಣೆ ನಡೆಸಿದ ನ್ಯಾಯಾಲಯ ಮದುವೆ ನಂತರವೂ ಅಪ್ರಾಪ್ತೆ ಜೊತೆ ವ್ಯಕ್ತಿ ಸಹಜೀವನ ನಡೆಸುತ್ತಿದ್ದರೆ ಅದು ಅಪರಾಧವಲ್ಲ ಎಂದಿದೆ.
ಸಹಜೀವನ ನಡೆಸಿದಾಗ ಅನೈತಿಕ ಸಂಬಂಧ ಇದೆ ಎಂದು ಹೇಳುವುದು ಕಷ್ಟ. ನೈತಿಕತೆಗೂ ಕಾನೂನಿಗೂ ಸಾಕಷ್ಟು ವ್ಯತ್ಯಸವಿದೆ. ಎಲ್ಲವನ್ನೂ ಕಾನೂನು ತೀರ್ಮಾನ ಮಾಡಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನೈತಿಕತೆ ಆಧಾರದ ಮೇಲೆ ವ್ಯಕ್ತಿಯ ಮೂಲಭೂತ ಹಕ್ಕಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಸಹಜೀವನ ನಡೆಸುತ್ತಿರುವವರ ಮನೆಗೆ ಕುಟುಂಬದ ಸದಸ್ಯರು ಹೋಗಿ ಬೆದರಿಕೆ ಹಾಕುವುದು, ಎಲೆಕ್ಟ್ರಿಕ್ ಮಾಧ್ಯಮದ ಮೂಲಕ ಸಂಪರ್ಕಿಸುವುದು ಸೇರಿದಂತೆ ಯಾವುದೇ ರೀತಿಯ ಬೆದರಿಕೆ ಹಾಕುವುದು ಮಾಡುವಂತಿಲ್ಲ ಎಂದು ಸೂಚಿಸಿರುವ ನ್ಯಾಯಾಲಯ, ದಂಪತಿಯ ಸುರಕ್ಷತೆ ಜವಾಬ್ದಾರಿಯನ್ನು ಪೊಲೀಸರು ವಹಿಸಿಕೊಳ್ಳಬೇಕು ಎಂದು ಸೂಚಿಸಿದೆ.



