Friday, November 22, 2024
Google search engine
Homeವಾಣಿಜ್ಯವಾಹನಗಳಿಗಾಗಿ ಹೊಸ ವಿನ್ಯಾಸದ ನಿಪ್ಪಾನ್ ಪೇಂಟ್ ಮಾರುಕಟ್ಟೆಗೆ

ವಾಹನಗಳಿಗಾಗಿ ಹೊಸ ವಿನ್ಯಾಸದ ನಿಪ್ಪಾನ್ ಪೇಂಟ್ ಮಾರುಕಟ್ಟೆಗೆ

ಬೆಂಗಳೂರು: ಏಷ್ಯಾ ಪೆಸಿಫಿಕ್‌ನ ನಂ. 1 ಪೇಂಟ್ ಮತ್ತು ಕೋಟಿಂಗ್ ಕಂಪನಿ ಆಗಿರುವ ನಿಪ್ಪಾನ್ ಪೇಂಟ್, ಆಗಸ್ಟ್ 29 ರಿಂದ 31ರವರೆಗೆ ಬೆಂಗಳೂರಿನಲ್ಲಿ ನಡೆದ ಭಾರತದ ಪ್ರಮುಖ ಮಲ್ಟಿಮಾಡೆಲ್ ಸಾರಿಗೆ ಪ್ರದರ್ಶನ ಕಾರ್ಯಕ್ರಮ ಪ್ರವಾಸ 2024ರಲ್ಲಿ ಭಾಗವಹಿಸಿತ್ತು.

ಪ್ರವಾಸ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಅನ್ನು ಬಸ್ ಆಂಡ್ ಕಾರ್ ಆಪರೇಟರ್ಸ್ ಕಾನ್ಫಿಡರೇಶನ್ ಆಫ್ ಇಂಡಿಯಾ (ಬಿಓಸಿಐ) ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಪ್ರಮುಖ ಭಾಷಣಕಾರರು, 200 ಪ್ರಮುಖ ಪ್ರದರ್ಶಕರು, 10000 ಬಿಸಿನೆಸ್ ವಿಸಿಟರ್ ಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿಪ್ಪಾನ್ ಪೇಂಟ್ ಸಂಸ್ಥೆಯು ವಾಣಿಜ್ಯ ವಾಹನ ಉದ್ಯಮಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಮತ್ತು ಭವಿಷ್ಯಕ್ಕೆ ಸಲ್ಲುವ ಪೇಂಟ್ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಪ್ರದರ್ಶಿಸಿತು. ಈ ಉತ್ಪನ್ನಗಳಲ್ಲಿ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ, ಶಾಖ ಮತ್ತು ಧೂಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಕೋಟಿಂಗ್ ಉತ್ಪನ್ನಗಳು ಕೂಡ ಒಳಗೊಂಡಿತ್ತು.

ಉತ್ಪಾದಕತೆಯನ್ನು ಉತ್ಪನ್ನಗೊಳಿಸುವ ಕೆಲವು ಪೇಟೆಂಟ್ ಹೊಂದಿರುವ ಉತ್ಪನ್ನಗಳನ್ನು ಕೂಡ ಪ್ರದರ್ಶನ ಮಾಡಲಾಯಿತು. ಕಂಪನಿಯು ತನ್ನ ಹೈಟೆಕ್ ಉತ್ಪನ್ನಗಳನ್ನು ಬಣ್ಣ ತಿದ್ದುಪಡಿ ಮತ್ತು ಅಭಿವೃದ್ಧಿ ಮಾಡಲು ವಿಶ್ವದ ಪ್ರಮುಖ ಎಐ ತಂತ್ರಜ್ಞಾನಗಳ ಜೊತೆ ಸಂಯೋಜಿಸಿದೆ. ಪೇಂಟಿಂಗ್ ಸಿಮ್ಯುಲೇಶನ್‌ಗಾಗಿ ವಿಆರ್ ಸಾಫ್ಟ್‌ ವೇರ್ ಮತ್ತು ಸ್ವಯಂಚಾಲಿತ ರೊಬೊಟಿಕ್ ಪೇಂಟ್ ಆಪ್ ಗಳ ಜೊತೆಯೂ ಸಂಯೋಜನೆ ಹೊಂದಿದೆ.

ಈ ಮೂಲಕ ಕಂಪನಿಯು ಅದರ ಪೇಂಟ್ ಸಿಸ್ಟಮ್ ಹೇಗೆ ಜಾಗತಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ ಮತ್ತು ಭಾರತದ ಸಾರಿಗೆ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಪ್ರದರ್ಶಿಸಿದೆ.

ಈ ಕುರಿತು ಮಾತನಾಡಿದ ನಿಪ್ಪಾನ್ ಪೇಂಟ್ ಇಂಡಿಯಾದ ಮಾರ್ಕೆಟಿಂಗ್ ಮತ್ತು ನ್ಯೂ ಬಿಸಿನೆಸ್ ಡೆವಲಪ್‌ಮೆಂಟ್ ಜನರಲ್ ಮ್ಯಾನೇಜರ್ ರಾಕೇಶ್ ಹಂಡೂ ಅವರು, “ಪ್ರವಾಸ್ 2024 ಕಾರ್ಯಕ್ರಮವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ 2047ರ ದೂರದೃಷ್ಟಿಗೆ ಅನುಗುಣವಾಗಿ ಸಮರ್ಥ ಸಾರ್ವಜನಿಕ ಸಾರಿಗೆಯ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದೆ. ಕಾರ್ಯಕ್ರಮದಲ್ಲಿ ನಾವು ಭಾರತದ ವಾಣಿಜ್ಯ ವಾಹನ ಉದ್ಯಮದಲ್ಲಿ ಕ್ರಾಂತಿ ಮಾಡಬಹುದಾದ ನಮ್ಮ ಅತ್ಯಾಧುನಿಕ ಉತ್ಪನ್ನವನ್ನು ಪ್ರದರ್ಶಿಸಿದ್ದೇವೆ. ಕಾರ್ಯಕ್ರಮದಲ್ಲಿ ನಮ್ಮ ಭಾಗವಹಿಸುವಿಕೆಯು ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಸುರಕ್ಷತೆ, ದಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ನವೀನ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಪುರಾವೆಯಾಗಿದೆ” ಎಂದು ಹೇಳಿದರು.

ನಿಪ್ಪಾನ್ ಪೇಂಟ್ ಇಂಡಿಯಾದ ಕಮರ್ಷಿಯಲ್ ವೆಹಿಕಲ್ ಕೋಟಿಂಗ್ಸ್‌ ನ ಜನರಲ್ ಮ್ಯಾನೇಜರ್ ನವೀನ್ ಚಾವ್ಲಾ ಅವರು, “ಪ್ರವಾಸ್ 2024 ಅದ್ಭುತ ಯಶಸ್ಸನ್ನು ಕಂಡಿದೆ ಮತ್ತು ಸಾರಿಗೆಯ ಹೊಸ ಅಧ್ಯಾಯದ ಕಡೆಗೆ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ಪ್ರವಾಸ್ ನಲ್ಲಿ ಪ್ರದರ್ಶಿಸಲಾದ ಶೇ.70ರಷ್ಟು ಬಸ್ ಗಳಲ್ಲಿ ನಮ್ಮ ಪೇಂಟ್ ವ್ಯವಸ್ಥೆ ನಿಪ್ಪಾನ್ ಪೇಂಟ್ ಬಳಸಲಾಗಿತ್ತು. ನಮ್ಮ ಉತ್ಪನ್ನಗಳ ಜೊತೆಗೆ ವಾಣಿಜ್ಯ ವಾಹನ ಉದ್ಯಮದಲ್ಲಿನ ಸಾಧ್ಯತೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಮ್ಮ ಬ್ರ್ಯಾಂಡ್‌ ಹೊಂದಿರುವ ಬದ್ಧತೆಯನ್ನು ನಾವು ಪ್ರದರ್ಶಿಸಿದ್ದೇವೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments