ಬಿಸಿಲಿನ ಹೊಡೆತ ತಾಳಲಾರದೇ ದೂರದರ್ಶನ ಸುದ್ದಿ ವಾಚಕಿ ನೇರಪ್ರಸಾರದ ವೇಳೆ ಕುಸಿದು ಬಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ.
ದೇಶಾದ್ಯಂತ ಬಿಸಿಗಾಳಿ ಹೊಡೆತಕ್ಕೆ ಜನರು ತತ್ತರಿಸುತ್ತಿದ್ದಾರೆ. ದೇಶದ ಹಲವೆಡೆ 40ರಿಂದ 46 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ದಾಖಲಾಗಿದೆ. ಇದರಿಂದ ಜನ ಸಾಮಾನ್ಯರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ದೂರದರ್ಶನದ ಕೋಲ್ಕತಾ ಶಾಖೆಯಲ್ಲಿ ಸುದ್ದಿ ವಾಚಕಿ ಕಾರ್ಯ ನಿರ್ವಹಿಸುತ್ತಿರುವ ಲೋಪಮುದ್ರ ಸಿನ್ಹಾ ನೇರ ಪ್ರಸಾರದಲ್ಲಿ ಸುದ್ದಿ ಪ್ರಸಾರದ ವೇಳೆ ಬಿಸಿಲಿನ ಕಾರಣ ರಕ್ತದೊತ್ತಡ ದಿಢೀರನೆ ಕುಸಿದಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ.
ದೂರದರ್ಶನದ ಸಿಬ್ಬಂದಿ ಕೂಡಲೇ ಲೋಪಮುದ್ರಾ ನೆರವಿಗೆ ಬಂದಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. ಟೆಲಿಪ್ರಾಂಪ್ಟರ್ ನಲ್ಲಿ ಓದುತ್ತಿದ್ದಾಗ ದಿಢೀರನೆ ಕಣ್ಣು ಕತ್ತಲೆ ಬಂದಂತಾಗಿ ಏನೂ ಕಾಣದೇ ಚೇರಿನಲ್ಲೇ ಹಿಂದೆ ವಾಲಿದ್ದಷ್ಟೇ ನನಗೆ ನೆನಪಿದೆ ಎಂದು ಅವರು ಹೇಳಿಕೊಂಡಿದ್ದಾರೆ.