ಜೈಲಿನಿಂದ ಹೊರಗೆ ಬಂದ ದರೋಡೆಕೋರನೊಬ್ಬ ನದಿಯಲ್ಲಿ ಜೀವಂತ ಹಾವನ್ನು ಹಿಡಿದು ತಿಂದ ಘಟನೆ ಉತ್ತರ ಪ್ರದೇಶದ ಫತೇಪುರದ ಕಿಶನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕಾ ಕ್ಯಾಂಪ್ ಬಳಿ ನಡೆದಿದೆ.
ಹಾವನ್ನು ತಿಂದ ವ್ಯಕ್ತಿಯನ್ನು ಡಕಾಯಿತ ಗಂಗಾ ಪ್ರಸಾದ್ ಅಲಿಯಾಸ್ ಫೌಜಿ (55) ಎಂದು ಗುರುತಿಸಲಾಗಿದೆ.
ಜನರನ್ನು ಸುಲಿಗೆ ಮಾಡುತ್ತಿದ್ದ ಶಂಕರ್ ಗ್ಯಾಂಗ್ ಗೆ ಸೇರಿಕೊಂಡಿದ್ದ ಗಂಗಾ ಪ್ರಸಾದ್ ಜೀವಂತ ಹಾವನ್ನು ನುಂಗಿದ್ದು, ಈ ವೀಡಿಯೋ ವೈರಲ್ ಆಗಿದೆ.
ಗ್ಯಾಂಗ್ ತೊರೆದು ಬಂಡಾ ಜಿಲ್ಲೆಯ ಕಮಾಸಿನ್ನ ಕಾಗರ್ ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿರುವ ಗಂಗಾ ಪ್ರಸಾದ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.
ನದಿಯಿಂದ ಹಾವನ್ನು ಹಿಡಿದುಕೊಂಡು ಬರುವ ಕಿರಾತಕ ಅದರ ತಲೆಯನ್ನು ಬಾಯಿಯಿಂದ ಕಚ್ಚಿ ಹಾಗೇ ತಿನ್ನುತ್ತಾನೆ. ಈ ಎಲ್ಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರು ವಿಡಿಯೋದಲ್ಲಿ ಸೆರೆಯಾಗಿವೆ. ಇದಕ್ಕೆ ಸಾಕಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
A Guy from Fatehpur Eats Snake Alive (Video of dacoit Ganga Prasad Surfaced)
pic.twitter.com/VFRl2fX3FS— Ghar Ke Kalesh (@gharkekalesh) July 8, 2024