ದೆಹಲಿಯ ಅತ್ಯಂತ ಪ್ರತಿಷ್ಠಿತ ಹಾಗೂ ಚರ್ಚೆಗೆ ಕಾರಣವಾಗಿರುವ ದಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ 28 ವರ್ಷಗಳ ನಂತರ ದಲಿತ ವ್ಯಕ್ತಿ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿಯಾದ ಧನಂಜಯ್ ಜೆಎನ್ ಯು ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದಾರೆ. 1996ರಲ್ಲಿ ಬಟ್ಟಿ ಲಾಲ್ ಭೈರ್ವಾ ನಂತರ ಇದೇ ಮೊದಲ ಬಾರಿ ದಲಿತ ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ಎ) 2598 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಂಬಲಿತ ಅಭ್ಯರ್ಥಿ ಸಿ.ಅಜ್ಮೀರ 1676 ಮತಗಳನ್ನು ಪಡೆದು ಪರಾಭವಗೊಂಡರು.
ಧನಂಜಯ್ ಬಿಹಾರದ ಬುದ್ಧನ ಜ್ಞಾನೋದಯದ ಊರಾದ ಗಯಾದ ನಿವಾಸಿ. ಸ್ಕೂಲ್ ಆಫ್ ಆರ್ಟ್ ಅಂಡ್ ಸೈನ್ಸ್ ವಿಭಾಗದ ಪಿಎಚ್ ಡಿ ವಿದ್ಯಾರ್ಥಿ ಆಗಿದ್ದಾರೆ.
ಎಡಪಕ್ಷಗಳು ಸ್ಪರ್ಧಿಸಿದ ಎಲ್ಲಾ ನಾಲ್ಕೂ ವಿಭಾಗಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಜೆಎನ್ ಯುನಲ್ಲಿ ಅಧಿಕಾರ ಹಿಡಿದರೆ, ಬಿಜೆಪಿ ಬೆಂಬಲಿತ ಎಬಿವಿಪಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ.