12ನೇ ಶತಮಾನದಲ್ಲಿ ನಿರ್ಮಾಣವಾದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರವನ್ನು 46 ವರ್ಷಗಳ ನಂತರ ಮೊದಲ ಬಾರಿ ತೆರೆಯಲಾಗಿದೆ.
ಒಡಿಶಾ ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನೇಮಿಸಿದ್ದ 12 ಸದಸ್ಯರ ಸಮಿತಿ ಭಾನುವಾರ ಬೆಳಿಗ್ಗೆ ಜಗನ್ನಾಥ ದೇವಸ್ಥಾನ ಪ್ರವೇಶಿಸಿದ್ದು, ಮಧ್ಯಾಹ್ನದ ನಂತರ ರತ್ನ ಭಂಡಾರ ತೆರೆಯಲಿದ್ದಾರೆ.
ರತ್ನ ಭಂಡಾರ ಕಾವಲಿಗೆ ಕಾಳಸರ್ಪ ಇದೆ ಎಂಬ ನಂಬಿಕೆ ಇರುವ ಕಾರಣ ಸಮಿತಿ ಹಾವು ಹಿಡಿಯುವ ಎರಡು ತಂಡಗಳನ್ನು ರತ್ನ ಭಂಡಾರದ ಬಳಿ ಕರೆದೊಯ್ಯಲಿದೆ.ಭಾನುವಾರ ಬೆಳಿಗ್ಗೆ ಸಮಿತಿ ಸದಸ್ಯರು ಹಾಗೂ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ರತ್ನ ಭಂಡಾರ ತೆರೆಯುವ ಪ್ರಕ್ರಿಯೆ ಆರಂಭಿಸಿದರು.
12ನೇ ಶತಮಾನದ ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರವನ್ನು 1978ರಲ್ಲಿ ರಥೋತ್ಸವದ ವೇಳೆ ಕೊನೆಯ ಬಾರಿಗೆ ತೆರೆಯಲಾಗಿತ್ತು.