ಸೀಮಿತ ವಿಮಾನ ಕರ್ತವ್ಯ ಸಮಯ ಮತ್ತು ವಿಮಾನ ಸಿಬ್ಬಂದಿಯ ಕತ್ಯವ್ಯ ವ್ಯವಸ್ಥೆಗಳಲ್ಲಿ ಮಾರ್ಗಸೂಚನೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾಗೆ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 80 ಲಕ್ಷ ರೂ.ದಂಡ ವಿಧಿಸಿದೆ.
ವಿಮಾನ ಸಂಸ್ಥೆಗಳು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿವೆಯೇ ಎಂಬ ಬಗ್ಗೆ ವಿಮಾನಯಾನ ನಿರ್ದೇಶನಾಲಯದ ಕಡ್ಗಾವಲು ಪಡೆ ನಡೆಸಿದ ಪರಿವೀಕ್ಷಣೆ ವೇಳೆ ನಿಯಮ ಉಲ್ಲಂಘನೆ ಕಂಡು ಬಂದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
ಮಾರ್ಚ್ 1ರಂದು ಏರ್ ಇಂಡಿಯಾ ಸಂಸ್ಥೆಗೆ ದಂಡ ಕುರಿತು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.