ಆಸ್ಪತ್ರೆಗೆ ನುಗ್ಗಿದ ಬಂದೂಕುಧಾರಿ ರೋಗಿಯ ಮೇಲೆ ಗುಂಡು ಹಾರಿಸಿ ಕೊಲೆಗೈದ ಆಘಾತಕಾರಿ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಬಹದ್ದೂರ್ ಆಸ್ಪತ್ರೆಯ ಗುರು ಟೆಗ್ ಆಸ್ಪತ್ರೆಯ ಮೂರನೇ ಅಂತಸ್ತಿಗೆ ನುಗ್ಗಿದ 18 ವರ್ಷದ ಯುವಕ ರೋಗಿಯ ಮೇಲೆ ಗುಂಡು ಹಾರಿಸಿದ್ದಾನೆ.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಆಸ್ಪತ್ರೆಯ ಮೂರನೇ ಮಹಡಿಗೆ ಬಂದ ಯುವಕ 3-4 ಸುತ್ತು ಗುಂಡು ಹಾರಿಸಿದ್ದರಿಂದ 32 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಗುಂಡಿನ ದಾಳಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಜೂನ್ 23ರಂದು ಖಜೂರಿಖಾಸ್ ನಿವಾಸಿ ರಿಯಾಜುದ್ದೀನ್ ಗುಂಡಿನ ದಾಳಿಗೆ ಮೃತಪಟ್ಟಿದ್ದು, ಈತ ಹೊಟ್ಟೆ ನೋವು ಎಂದು ಜೂನ್ 23ರಂದು ಆಸ್ಪತ್ರೆಗೆ ದಾಖಲಾಗಿದ್ದರು.