ಅಮೆರಿಕದ ಮಹಿಳೆಯಿಂದ 6 ಕೋಟಿ ರೂ. ಪಡೆದು 300 ಮೌಲ್ಯದ ಚಿನ್ನ ಲೇಪಿತ ಬೆಳ್ಳಿಯ ಆಭರಣ ನೀಡಿ ರಾಜಸ್ಥಾನ್ ನ ಜೈಪುರದ ಜ್ಯೂವೆಲರಿ ಅಂಗಡಿ ಮಾಲೀಕ ವಂಚಿಸಿದ್ದಾನೆ!
ಅಮೆರಿಕದ ಚೆರಿಶ್ ಎಂಬ ಮಹಿಳೆ ಜೈಪುರದ ಜೊಹ್ರಿ ಬಜಾರ್ ನಲ್ಲಿ ವಂಚನೆಗೆ ಒಳಗಾಗಿದ್ದು, ಇಷ್ಟು ದೊಡ್ಡ ಮೋಸದಿಂದ ಆಘಾತಕ್ಕೆ ಒಳಗಾಗಿದ್ದಾಳೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಅಮೆರಿಕದಲ್ಲಿ ನಡೆದ ಆಭರಣ ಮಳಿಗೆಯಲ್ಲಿ ಅಮೆರಿಕನ್ ಮಹಿಳೆ ಆಭರಣ ಖರೀಸಿದ್ದಳು. ಆಭರಣ ನಕಲಿ ಎಂದು ತಿಳಿದ ಕೂಡಲೇ ಭಾರತಕ್ಕೆ ಬಂದು ಅಂಗಡಿ ಮಾಲೀಕನನ್ನು ಭೇಟಿ ಮಾಡಿ ತನಗೆ ನಕಲಿ ಆಭರಣ ನೀಡಲಾಗಿದೆ ಎಂದು ತಿಳಿಸಿದರು.
ಅಂಗಡಿ ಮಾಲೀಕ ಆರೋಪವನ್ನು ತಳ್ಳಿ ಹಾಕಿದ್ದರಿಂದ ಮಹಿಳೆ ಜೈಪುರದ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕ ಗೌರವ್ ಸೋನಿ ವಿರುದ್ಧ ದೂರು ನೀಡಿದಳು. ಅಲ್ಲದೇ ಅಮೆರಿಕನ್ ರಾಯಭಾರಿ ಕಚೇರಿಯಿಂದ ನೆರವು ನೀಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.
2022ರಲ್ಲಿ ಇನ್ ಸ್ಟಾಗ್ರಾಂನಲ್ಲಿ ಗೌರವ್ ಸೋನಿ ಅವರ ಪರಿಚಯ ಮಾಡಿಕೊಂಡಿದ್ದು, ಕಳೆದ 2 ವರ್ಷಗಳಲ್ಲಿ 6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿದ್ದೆ. ಆದರೆ ಅವುಗಳೆಲ್ಲಾ ನಕಲಿ ಎಂಬುದು ಈಗ ತಿಳಿಯಿತು ಎಂದು ವಿವರಿಸಿದ್ದಾಳೆ.
ಜೈಪುರ ಪೊಲೀಸರು ಆರೋಪಿ ಗೌರವ್ ಸೋನಿ ಹಾಗೂ ಅವರ ತಂದೆ ರಾಜೇಂದ್ರ ಸೋನಿ ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಇಬ್ಬರೂ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.