Thursday, November 21, 2024
Google search engine
Homeಬೆಂಗಳೂರುಶಿವಮೊಗ್ಗದಲ್ಲಿ ವೃದ್ಧ ಬಲಿ: ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿ!

ಶಿವಮೊಗ್ಗದಲ್ಲಿ ವೃದ್ಧ ಬಲಿ: ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿ!

ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ 73 ವರ್ಷ ದ ವೃದ್ಧ ಝೀಕಾ ವೈರಸ್ ಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೊದಲ ಬಲಿ ವರದಿಯಾಗಿದೆ.

ಜೂನ್ 24ರಂದು ವ್ಯಕ್ತಿಗೆ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಅಸುನೀಗಿದ್ದಾರೆ.

ರಾಜ್ಯದಲ್ಲಿ ಒಟ್ಟು 9 ಝಿಕಾ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ ಶಿವಮೊಗ್ಗದಲ್ಲಿ ಮೂರು ಹಾಗೂ ಬೆಂಗಳೂರಲ್ಲಿ 6 ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನ ಜಿಗಣಿಯಲ್ಲಿ ಒಂದೇ ಕಡೆ 6 ಝೀಕಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಮೂವರು ಗರ್ಭಿಣಿಯರಾಗಿದ್ದರೆ.

ಮೂವರ ಗರ್ಭಿಣಿಯರ ಪೈಕಿ ಒಬ್ಬರು ಅಸ್ಸಾಂ ಮೂಲದವರಾಗಿದ್ದು, ಕಳೆದ ಒಂದು ವರ್ಷದಿಂದ ಜಿಗಣಿಯಲ್ಲಿ ವಾಸವಾಗಿದ್ದಾರೆ. ಉಳಿದ ಇಬ್ಬರು ಗರ್ಭಿಣಿಯರು ಜಿಗಣಿ ನಿವಾಸಿಯಾಗಿದ್ದಾರೆ. ಒಬ್ಬರಿಗೆ ಹೆರಿಗೆಯಾಗಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆ. ಇಬ್ಬರು ಗರ್ಭಿಣಿಯರು ವೈದ್ಯರ ನಿಗಾದಲ್ಲಿ ಇದ್ದಾರೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments