ಮದ್ಯ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷ 100 ಕೋಟಿ ರೂ. ಕಿಕ್ ಪಡೆದಿರುವ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ಗಂಭೀರ ಆರೋಪ ಮಾಡಿದೆ.
ವಿಜಯ್ ನಾಯರ್ ಸೇರಿದಂತೆ ದಕ್ಷಿಣದ ತಂಡದಿಂದ ಮದ್ಯ ನೀತಿ ಮೂಲಕ 100 ಕೋಟಿ ರೂ. ಕಿಕ್ ಬ್ಯಾಕ್ ನೇರವಾಗಿ ಪಡೆಯಲಾಗಿದೆ. ಇದಕ್ಕಾಗಿ ಅವರಿಗೆ ಪರೋಕ್ಷವಾಗಿ ಮದ್ಯ ನೀತಿ ಮೂಲಕ ನೆರವು ಮಾಡಿಕೊಡಲು ಒಪ್ಪಂದ ಆಗಿತ್ತು ಎಂದು ಜಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ 100 ಕೋಟಿ ಕಿಕ್ ಬ್ಯಾಕ್ ಪಡೆದ ಹಿಂದೆ ನೇರವಾಗಿ ಭಾಗಿಯಾಗಿದ್ದಾರೆ. ಅಲ್ಲದೇ ಈ ಹಗರಣದ ಕಿಂಗ್ ಪಿನ್ ಆಗಿದ್ದಾರೆ. 100 ಕೋಟಿ ಕಿಕ್ ಬ್ಯಾಕ್ ನಲ್ಲಿ 45 ಕೋಟಿ ರೂ.ವನ್ನು ಗೋವಾದಲ್ಲಿ ಪಕ್ಷದ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಆರೋಪದಲ್ಲಿ ವಿವರಿಸಲಾಗಿದೆ.