ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಮ್ಯಾಥ್ಯೂ ವೇಡ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದ 34 ವರ್ಷದ ಮ್ಯಾಥ್ಯೂ ವೇಡ್ 13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ತೆರೆ ಘೋಷಿಸಿದ್ದಾರೆ.
2021ರ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದರು. ಅಲ್ಲದೇ ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
36 ಟೆಸ್ಟ್ ಪಂದ್ಯಗಳಲ್ಲಿ 4 ಶತಕ, 5 ಅರ್ಧಶತಕ ಸೇರಿದಂತೆ 29.87ರ ಸರಾಸರಿಯಲ್ಲಿ 1613 ರನ್ ಗಳಿಸಿದ್ದು, 97 ಏಕದಿನ ಪಂದ್ಯದಲ್ಲಿ 1 ಶತಕ ಹಾಗೂ 11 ಅರ್ಧಶತಕ ಒಳಗೊಂಡಂತೆ 26.87 ಸರಾಸರಿಯಲ್ಲಿ 1867 ರನ್ ಬಾರಿಸಿದ್ದಾರೆ. 92 ಟಿ-20ಯಲ್ಲಿ 3 ಅರ್ಧಶತಕ ಗಳಿಸಿದಂತೆ 26.03 ಸರಾಸರಿಯಲ್ಲಿ 1202 ರನ್ ಗಳಿಸಿದ್ದಾರೆ.