Home ಬೆಂಗಳೂರು KPTCL ಕೆಪಿಟಿಸಿಎಲ್‌ ಹುದ್ದೆಗಳಿಗೆ ಅರ್ಜಿ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ

KPTCL ಕೆಪಿಟಿಸಿಎಲ್‌ ಹುದ್ದೆಗಳಿಗೆ ಅರ್ಜಿ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ

by Editor
0 comments
kptcl

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳಲ್ಲಿ ಕೈಗೊಳ್ಳಲಾಗಿರುವ ಕಿರಿಯ ಸ್ಟೇಷನ್‌ ಪರಿಚಾರಕ ಮತ್ತು ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳ ನೇಮಕಾತಿಗೆ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇ-ಸಹಿ ಮಾಡಿ ಅಂಚೆ ಚಲನ್‌ ಪಡೆಯುವ ದಿನಾಂಕವನ್ನು ಹಾಗೂ ಅರ್ಜಿ ಶುಲ್ಕ ಪಾವತಿ ಮಾಡುವ ದಿನಾಂಕವನ್ನು ಕ್ರಮವಾಗಿ ಡಿ.5 ಹಾಗೂ ಡಿ. 10 ರವರೆಗೆ ವಿಸ್ತರಿಸಲಾಗಿದೆ.

ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳಲ್ಲಿ ಸದರಿ ಹುದ್ದೆಗಳ ಭರ್ತಿಗಾಗಿ 2024ರ ಅಕ್ಟೋಬರ್ 14ರಂದು ಉದ್ಯೋಗ ಪ್ರಕಟಣೆ ಹೊರಡಿಸಲಾಗಿತ್ತು. ಅದರಂತೆ, ನೇಮಕಾತಿಗೆ ಅರ್ಜಿ ಸಲ್ಲಿಸಲು 2024ರ ನವೆಂಬರ್‌ 20 ಹಾಗೂ ಅರ್ಜಿ ಶುಲ್ಕ ಪಾವತಿಸಲು ನವೆಂಬರ್‌ 25ಕ್ಕೆ ಕೊನೆಯ ದಿನಾಂಕವೆಂದು ನಿಗದಿ ಪಡಿಸಲಾಗಿತ್ತು.

ಆನ್‌ಲೈನ್‌ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಹಂತ ಹಂತವಾಗಿ ಮಾಡಬೇಕಿದ್ದು, ಅರ್ಜಿ ನಮೂನೆಯಲ್ಲಿ ಮಾಹಿತಿ ಸಲ್ಲಿಸುವುದು, ಅರ್ಜಿ ಶುಲ್ಕ ಪಾವತಿಗೆ ಅಂಚೆ ಇಲಾಖೆಯ ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಅರ್ಜಿ ಶುಲ್ಕ ಪಾವತಿಸಬೇಕಿದೆ. ಅದಕ್ಕೂ ಮುನ್ನ ಅಭ್ಯರ್ಥಿಗಳು ಇ-ಸಹಿ ಪ್ರಕ್ರಿಯ ಪೂರ್ಣಗೊಳಿಸಬೇಕಿರುತ್ತದೆ. ಆದರೆ, ನಿಗದಿಪಡಿಸಿದ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಅಭ್ಯರ್ಥಿಗಳು ತಿಳಿಸಿರುವ ಹಿನ್ನೆಲೆಯಲ್ಲಿ, ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಕಪಿಟಿಸಿಎಲ್‌ ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳ ಮನವಿ ಪರಿಗಣಿಸಿ ಅರ್ಜಿ ಸಲ್ಲಿಕೆಯ ಮೊದಲೆರಡು ಹಂತ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳಿಗೆ ಸೀಮಿತೊಳಿಸಿ, ಇ-ಸಹಿ ಪ್ರಕ್ರಿಯೆ, ಅಂಚೆ ಕಚೇರಿ ಚಲನ್‌ ಡೌನ್‌ಲೋಡ್‌ ಮತ್ತು ಅರ್ಜಿ ಶುಲ್ಕ ಪಾವತಿ ದಿನಾಂಕಗಳನ್ನು ವಿಸ್ತರಿಸಲಾಗಿದೆ ಎಂದು ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

banner

ವಿಸ್ತರಿಸಲಾಗಿರುವ ಅವಧಿಯ ಸದುಪಯೋಗ ಪಡೆದು, ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸುವಂತೆ ಮತ್ತು ಅರ್ಜಿ ಶುಲ್ಕ ಪಾವತಿಸುವಂತೆ ಕೋರಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬಿಜೆಪಿಗೆ ಮಹಾರಾಷ್ಟ್ರ ಸಿಎಂ ಪಟ್ಟ, 2 ಪಕ್ಷಗಳಿಗ ಡಿಸಿಎಂ ಸ್ಥಾನ? World News 60 ದಿನಗಳ ಕದನ ವಿರಾಮ ಘೋಷಿಸಿದ ಇಸ್ರೇಲ್-ಹೆಜಾಬುಲ್ಲಾ! ಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ? Priyanka Gandhi ನ.28ಕ್ಕೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಲಿರುವ ಪ್ರಿಯಾಂಕಾ ಗಾಂಧಿ ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ