ಬೆಂಗಳೂರು: ಹಣಕಾಸು ಸಾಕ್ಷರತೆಯನ್ನು ಹೆಚ್ಚಿಸುವುದಕ್ಕಾಗಿ ನಿಬದ್ಧವಾದ ಭಾರತದ ಮುಂಚೂಣಿ ಹೂಡಿಕೆ ಸಲಹೆ ಮತ್ತು ಜ್ಞಾನ ವೇದಿಕೆಯಾದ ಸ್ಟಾಕ್‌ಗ್ರೋ, ಝೊಮ್ಯಾಟೋದ ಡೆಲಿವರಿ ಭಾಗೀದಾರರು ತಮ್ಮ ಹಣಕಾಸುಗಳನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸುವುದಕ್ಕೆ ನೆರವಾಗುವ ಸಲುವಾಗಿ ಭಾರತದ ಆಹಾರ ಆರ್ಡರಿಂಗ್ ಮತ್ತು ಡೆಲಿವರಿ ವೇದಿಕೆಯಾದ ಝೊಮ್ಯಾಟೋದೊಂದಿಗೆ ತನ್ನ ಸಹಯೋಗವನ್ನು ಘೋಷಿಸಲು ಹೆಮ್ಮೆ ಪಡುತ್ತದೆ. ಝೊಮ್ಯಾಟೋದ ಡೆಲಿವರಿ ಭಾಗೀದಾರರು ತಮ್ಮ ಗಳಿಕೆಗಳನ್ನು ನಿಭಾಯಿಸಿ, ತಮ್ಮ ಹಣಕಾಸು ಸ್ಥಿತಿಗತಿಗಳನ್ನು ಪರಿಣಾಮಕಾರಿಯಾಗಿ ವರ್ಧಿಸಿಕೊಳ್ಳುವು-ದಕ್ಕೆ ಅಗತ್ಯವಾದ ಅಮೂಲ್ಯ ಸಾಧನಗಳು ಹಾಗೂ ಅತ್ಯಾವಶ್ಯಕ ಜ್ಞಾನ ನೀಡಿ ಅವರನ್ನು ಸಬಲಗೊಳಿಸುವುದು ಈ ಸಹಯೋಗದ ಗುರಿಯಾಗಿದೆ.
ಈ ಉಪಕ್ರಮದ ಮೂಲಕ ಝೊಮ್ಯಾಟೋ ಸ್ಟಾಕ್‌ಗ್ರೋದೊಡನೆ ಸಹಯೋಗ ಏರ್ಪಡಿಸಿಕೊಂಡು, ಅಗತ್ಯಕ್ಕೆ ತಕ್ಕ ಶೈಕ್ಷಣಿಕ ಅಧಿವೇಶನಗಳ ಮೂಲಕ ತನ್ನ ಡೆಲಿವರಿ ಭಾಗೀದಾರರನ್ನು ಹಣಕಾಸು ಸಾಕ್ಷರತೆಯೊಂದಿಗೆ ಸಬಲಗೊಳಿಸುತ್ತಿದೆ. ಈ ಅಧಿವೇಶನಗಳು, ಹಿಂದಿ, ತಮಿಳು, ತೆಲುಗು, ಬಂಗಾಳಿ, ಕನ್ನಡ ಹಾಗೂ ಇತರ ಭಾಷೆಗಳೂ ಒಳಗೊಂಡಂತೆ, ಇನ್ನೂ ಅನೇಕ ಭಾಷೆಗಳಲ್ಲಿ ಲಭ್ಯವಿದ್ದು, ದೇಶಾದ್ಯಂತ ಇರುವ ಡೆಲಿವರಿ ಭಾಗೀದಾರರು ಕಂಟೆಂಟ್‌ಅನ್ನು ಸುಲಭವಾಗಿ ಪಡೆದುಕೊಳ್ಳುವುದಕ್ಕೆ ಅವಕಾಶ ಒದಗಿಸಲಿವೆ. ಈ ಅಧಿವೇಶನಗಳು, ಬಜೆಟಿಂಗ್, ಉಳಿತಾಯ, ಹೂಡಿಕೆ ಹಾಗೂ ಭವಿಷ್ಯತ್ತಿನ ಯೋಜನೆ ಮುಂತಾದ ಅತ್ಯಾವಶ್ಯಕ ವಿಷಯಗಳನ್ನು ಹೊಂದಿರಲಿದೆ. ಗಿಗ್ ಕಾರ್ಮಿಕರ ಗಳಿಕೆ ಸಾಧ್ಯತೆ ಹಾಗೂ ಹಣಕಾಸು ಸ್ಥಿರತೆಯನ್ನು, ಕೌಶಲ್ಯವರ್ಧನೆ, ಸಹಭಾಗಿತ್ವಗಳು, ಮತ್ತು ಲಾಭದಾಯಕ ಪ್ರೊಗ್ರಾಮ್‌ಗಳ ಮೂಲಕ ಹೆಚ್ಚಿಸಿ ಅವರು ತಮ್ಮ ಗುರಿಗಳನ್ನು ಸಾಧಿಸಿಕೊಳ್ಳುವುದಕ್ಕಾಗಿ 1 ದಶಲಕ್ಷ ಗಿಗ್ ಕಾರ್ಮಿಕರನ್ನು ಸಬಲಗೊಳಿಸನೇಕೆನ್ನುವ ಝೊಮ್ಯಾಟೋದ ಬದ್ಧತೆಗೆ ಇದು ಅನುಗುಣವಾಗಿದೆ.
ಈ ಉಪಕ್ರಮದ ಭಾಗವಾಗಿ ಸ್ಟಾಕ್‌ಗ್ರೋ, 500+ ಡೆಲಿವರಿ ಭಾಗೀದಾರರಿಗೆ ಅತ್ಯಾವಶ್ಯಕವಾದ ಹಣಕಾಸು ಕೌಶಲ್ಯಗಳಿಂದ ಸಜ್ಜುಗೊಳಿಸುವಂತಹ 10 ಅಧಿಕ-ಪ್ರಭಾವದ ಹಣಕಾಸು ಸಾಕ್ಷರತಾ ಅಧಿವೇಶನಗಳನ್ನು ಯಶಸ್ವಿಯಾಗಿ ನಡೆಸಿಕಟ್ಟಿದೆ. ಬಜೆಟಿಂಗ್, ಉಳಿತಾಯ, ಹೂಡಿಕೆ ಹಾಗೂ ಭವಿಷ್ಯತ್ತಿನ ಯೋಜನೆ ಮುಂತಾದ ವಿಷಯಗಳಿದ್ದ ಈ ಅಧಿವೇಶಗಳು, ಡೆಲಿವಿ ಭಾಗೀದಾರರು ತಮ್ಮ ಗಳಿಕೆಗಳ ಮೇಲೆ ನಿಯಂತ್ರಣ ಸಾಧಿಸಿ, ಹಣಕಾಸ ಭದ್ರತೆಯ ನಿರ್ಮಾಣ ಮಾಡಿಕೊಂಡು ಒಂದು ಸ್ಥಿರವಾದ ಭವಿಷ್ಯತ್ತಿಗಾಗಿ ಯೋಜನೆ ಮಾಡಲು ಬಲ ನೋಡಿದೆ. ಈ ಉಪಕ್ರಮವ, ಗಿಗ್ ಆರ್ಥಿಕತಯೊಳಗೆ ಹಣಕಾಸು ಸ್ವಾಸ್ಥ್ಯವನ್ನು ವರ್ಧಿಸುವಲ್ಲ ಒಂದು ಮಹತ್ತರವಾದ ಹೆಜ್ಜೆಯಾಗಿದ್ದು ಡೆಲಿವರಿ ಭಾಗೀದಾರರು ತಮ್ಮ ಜೀವನೋಪಾಯಗಳು ಹಾಗೂ ದೀರ್ಘಾವಧಿ ಸಮೃದ್ಧಿಯ ಮೇಲೆ ನೇರ ಪ್ರಭಾವ ಬೀರುವಂತಹ ಮಾಹಿತಯುಕ್ತ ತೀರ್ಮಾನಗಳನ್ನು ಕೈಗೊಳ್ಳುವುದಕ್ಕೆನೆರವಾಗಲಿದ.
ಈ ಉಪಕ್ರಮದ ಬಗ್ಗೆ ಮಾತನಾಡುತ್ತಾ, ಸ್ಟಾಕ್‌ಗ್ರೋದ ಸ್ಥಾಪಕ ಮತ್ತು ಸಿಇಒ ಶ್ರೀ ಅಜಯ್ ಲಖೋಟಿಯ, “ಸ್ಟಾಕ್‌ಗ್ರೋದಲ್ಲಿ ನಾವು, ದೀರ್ಘಾವಧಿವೈಯಕ್ತ ಬೆಳವಣಿಗೆಗ ಹಣಕಾಸ ಸಾಕ್ಷರತೆ ಅತಿಮುಖ್ಯ ಎಂದು ನಂಬಿದ್ದೇವೆ. ಡೆಲಿವರಿ ಭಾಗೀದಾರರಿಗೆ ಅವರು ಹೆಚ್ಚು ಸ್ಮಾರ್ಟ್ ಆದ ಹಣಕಾಸು ತೀರ್ಮಾನಗಳನ್ನ ಕೈಗೊಳ್ಳುವುದಕ್ಕೆ ಅವರಿಗೆ ಅಗತ್ಯವದ ಜ್ಞಾನ ಹಾಗೂ ಕೌಶಲ್ಯಗಳ್ನ ಒದಗಿಸಿ ಸಬಲೊಳಿಸವದ್ಕಾಗಿ ಝೊಮ್ಯಾಟೋದಂದಿಗೆ ಸಹಯೋಗ ಏರ್ಪಡಿಸಿಕೊಂಡಿರುವುದಕ್ಕೆ ನಮಗೆ ಅತ್ಯಂತ ಉತ್ಸಾಹವೆನಿಸುತ್ತಿದೆ. ಈ ಸಹಯೋಗವು ಅವರ ಹಣಕಾಸು ಸುಭದ್ರತೆಯನ್ನು ಸುಧಾರಿಸುವುದು ಮಾತ್ರವ್ಲೆ, ಅವರು ಸ್ವತಃ ತಮಗಾಗಿ ಮತ್ತು ತಮ್ಮ ಕುಟುಂಬದವರಿಗಾಗಿ ಇನ್ನೂ ಉತ್ತಮವಾದ ಭವಿಷ್ಯತ್ತನ್ನು ನಿರ್ಮಾಣ ಮಾಡಿಕೊಳ್ಳಲು ಬಲಒದಗಿಸುತ್ತದೆ.” ಎಂದರು.
“ಝೊಮ್ಯಾಟೋದಲ್ಲಿ ನಮ್ಮ ಡೆಲಿವರಿ ಭಾಗೀದಾರರೇ ನಮ್ಮ ವ್ಯಾಪಾರದ ಬೆನ್ನೆಲುಬಾಗಿದ್ದಾರೆ ಮತ್ತು ಅವರಿಗಾಗಿ ಇನ್ನ ಹೆಚ್ಚು ಬೆಂಬಲಾತ್ಮಕ ಪರಿಸರ ನಿರ್ಮಾಣ ಮಾಡಿಕೊಡುವುದಕ್ಕೆ ನಾವು ಬದ್ಧರಾಗಿದ್ದೇವೆ. ಸ್ಟಾಕ್‌ಗ್ರೋದೊಂದಿಗಿನ ಈ ಸಹಯೋಗದ ಮೂಲಕ ಅವರು ತಮ್ಮ ಹಣಕಾಸು ಪಯಣದ ನಿಯಂತ್ರಣವನ್ನು ಕೈಗೆತ್ತಿಕೊಳ್ಳುವುದಕ್ಕೆ ಅಗತ್ಯವಾದ ಸಾಧನಗಳನ್ನು ಒದಗಿಸಿ,ಅವರು ಮಾಹಿತಿಯುಕ್ತ ತೀರ್ಮಾನಗಳನ್ನು ಕೈಗೊಂಡು ಇನ್ನೂ ಹೆಚ್ಚು ಆರೋಗ್ಯಕರವಾದ ಭವಿಷ್ಯತ್ತನ್ನು ಭದ್ರಪಡಿಸಿಕೊಳ್ಳುವುದಕ್ಕೆ ನೆರವಾಗುವುದು ನಮ್ಮ ಗುರಿಯಾಗಿದೆ.” ಎಂದು ಹೇಳಿದರು, ಝೊಮ್ಯಾಟೋದ ಚೀಫ್ ಸಸ್ಟೇನಬಿಲಿಟಿ ಆಫಿಸರ್ ಅಂಜಲಿ ರವಿ ಕುಮಾರ್.


