17 ವರ್ಷದ ಬಾಲಕನಿಗೆ ಹುಟ್ಟಿನಿಂದಲೇ ಹೊಟ್ಟೆಯಿಂದಲೇ ಬಂದಿದ್ದ ಹೆಚ್ಚುವರಿ ಎರಡು ಕಾಲುಗಳನ್ನು ದೆಹಲಿಯ ಏಮ್ಸ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ.
ಬಾಲಕನಿಗೆ ಹೊಟ್ಟೆ ಮೇಲೆ ಬಂದಿದ್ದ ಕಾಲುಗಳು ಸೇರಿದಂತೆ ನಾಲ್ಕು ಕಾಲುಗಳಿದ್ದವು. ದೆಹಲಿಯ ಏಮ್ಸ್ ವೈದ್ಯರು ಇದೇ ಮೊದಲ ಬಾರಿ ಇಂತಹ ಅಪರೂಪದ ಸಮಸ್ಯೆ ಕಂಡು ಬಂದಿತ್ತು. ವೈದ್ಯಕೀಯ ಇತಿಹಾಸದಲ್ಲೇ ಅಪರೂಪ ಎನ್ನಬಹುದಾದ ಸಮಸ್ಯೆಯನ್ನು ಏಮ್ಸ್ ವೈದ್ಯರು ಯಶಸ್ವಿಯಾಗಿ ಬಗೆಹರಿಸಿದ್ದಾರೆ.
ಈ ಸಮಸ್ಯೆ ಕೋಟಿಗೆ ಒಬ್ಬರಲ್ಲಿ ಮಾತ್ರ ಕಾಣಿಸುತ್ತದೆ. ಇದು ಪ್ಯಾರಸ್ಟಿಕ್ ಟ್ವಿನ್ಸ್ ಎಂಬ ಸಮಸ್ಯೆ ಆಗಿದ್ದು, ಇದು ಅವಳಿ ಜವಳಿ ಮಕ್ಕಳಾಗುವ ಸಂದರ್ಭದಲ್ಲಿ ಎರಡೂ ದೇಹಗಳು ಸೇರಿಕೊಂಡಾಗ ಈ ರೀತಿ ಅಂಗಾಂಗಳು ಹೆಚ್ಚುವರಿಯಾಗಿ ಕಾಣಿಸುತ್ತವೆ ಎಂದು ವೈದ್ಯೆ ಅಸುರಿ ಕೃಷ್ಣ ಎಂದು ವಿವರಿಸಿದ್ದಾರೆ.
ವಿಶ್ವದಲ್ಲೇ ಇಂತಹ ಅಪರೂಪದ 42 ಪ್ರಕರಣಗಳು ಮಾತ್ರ ಇದುವರೆಗೆ ಪತ್ತೆಯಾಗಿವೆ. ಉತ್ತರ ಪ್ರದೇಶದ ಬಾಲಿಯಾದ 17 ವರ್ಷದ ಬಾಲಕನಲ್ಲಿ ಈ ರೀತಿ ಸಮಸ್ಯೆ ಕಾಣಿಸಿಕೊಂಡಿದೆ. ಈತ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಕಾಲುಗಳು ಯಾರಿಗೂ ಕಾಣದಂತೆ ಮರೆಮಾಚಿಕೊಂಡು ಜೀವನ ನಡೆಸುತ್ತಿದ್ದ.
8ನೇ ತರಗತಿ ಪಾಸಾಗಿದ್ದರೂ ದೈಹಿಕ ಊನತೆಯಿಂದ ಶಾಲೆ ತೊರೆದಿದ್ದ. ಈತನ ದೈಹಿಕ ಸಮಸ್ಯೆಯನ್ನು ಸ್ನೇಹಿತರು ಆಡಿಕೊಂಡು ನಗುತ್ತಿದ್ದರು. ಸ್ಥಳೀಯ ವೈದ್ಯರ ಶಿಫಾರಸ್ಸಿನ ಮೇರೆಗೆ ಏಮ್ಸ್ ವೈದ್ಯರು ತಪಾಸಣೆ ಮಾಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಹೆಚ್ಚುವರಿ 2 ಕಾಲುಗಳನ್ನು ತೆಗೆದಿದ್ದಾರೆ.