Tuesday, May 26, 2026
Google search engine
Homeದೇಶಮುಂಗಾರು ಒಂದು ವಾರ ವಿಳಂಬ: ರೈತರಿಗೆ ನಿರಾಸೆ

ಮುಂಗಾರು ಒಂದು ವಾರ ವಿಳಂಬ: ರೈತರಿಗೆ ನಿರಾಸೆ

ನಿರೀಕ್ಷೆಗೂ ಮೊದಲೇ ಪ್ರವೇಶಿಸಬೇಕಿದ್ದ ಮುಂಗಾರು ಒಂದು ವಾರ ತಡವಾಗಿ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 26ರಂದು ಕೇರಳ ಪ್ರವೇಶಿಸಿದ ನಂತರ ಜೂನ್‌ 1ರಂದು ಕರ್ನಾಟಕವನ್ನು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇದೀಗ ಬದಲಾದ ವಾತಾವರಣದಿಂದಾಗಿ ಒಂದು ವಾರ ತಡವಾಗಿ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಿದೆ.

ಜೂನ್‌ 2 ಅಥವಾ 4ರಂದು ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು, ಒಂದು ವಾರದಲ್ಲಿ ಕರ್ನಾಟಕ ಕರಾವಳಿಯನ್ನು ಪ್ರವೇಶಿಸಲಿದೆ. ಈ ಬಾರಿ ಮುಂಗಾರು ಶೇ.70ರಷ್ಟು ಆಗಲಿದ್ದು, ಕೊರತೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮುಂಗಾರು ದೇಶದ ಪ್ರಮುಖ ಮಳೆಯಾಗಿದ್ದು, ದೇಶಾದ್ಯಂತ ಸುರಿಯಲಿದ್ದು, ಬಹುತೇಕ ನದಿಗಳು ಭರ್ತಿ ಮಾಡುತ್ತದೆ. ಆದರೆ ಈ ಬಾರಿ ಮಳೆ ಪ್ರಮಾಣ ಅತಂತ್ರವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಮುದ್ರದಲ್ಲಿ ಉಷ್ಣಾಂಶದ ಒತ್ತಡದಲ್ಲಿ ಬದಲಾವಣೆಗಳು ಆಗುತ್ತಿದೆ. ಇದರಿಂದ ವಾತಾವರಣದ ಒತ್ತಡದ ವ್ಯವಸ್ಥೆಯಲ್ಲಿ ಏರಿಳಿತಗಳು ಆಗುತ್ತಿವೆ. ಆದ್ದರಿಂದ ಮುಂಗಾರು ಪ್ರವೇಶದ ದಿನಾಂಕ ನಿರ್ದಿಷ್ಟವಾಗಿ ಹೇಳುವುದು ಅಸಾಧ್ಯವಾಗಿದೆ ಎಂದು ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments