ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಬಳಕೆ ಶುಲ್ಕವನ್ನು ಸೋಮವಾರದಿಂದಲೇ ಜಾರಿಗೆ ಬರುವಂತೆ ಶೇ.50ರಷ್ಟು ಏರಿಕೆ ಮಾಡಿದೆ.
ಪರಿಷ್ಕೃತ ದರ ಏಪ್ರಿಲ್ 1ರಿಂದ ಜಾರಿಗೆ ಆಗಬೇಕಿತ್ತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆದ್ದಾರಿ ಶುಲ್ಕ ದರ ಏರಿಕೆಯನ್ನು ಮುಂದೂಡಿತ್ತು.
ಪ್ರತಿವರ್ಷವೂ ಸಗಟು ಹಣದುಬ್ಬರ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಅದೇ ರೀತಿ ಈ ವರ್ಷದ ಆರ್ಥಿಕ ವರ್ಷದಿಂದ ಪರಿಷ್ಕೃತ ದರ ಏರಿಕೆಯಾಗಬೇಕಿತ್ತು.
ದೇಶದಲ್ಲಿ ಒಟ್ಟು 885 ಹೆದ್ದಾರಿ ಟೋಲ್ ಪ್ಲಾಜಾಗಳಿವೆ. ಈ ಪೈಜಕಿ 675 ಟೋಲ್ ಗಳು ಸರ್ಕಾರದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ.180 ಟೋಲ್ ಗಳು ಖಾಸಗಿ ಒಡೆತನದಲ್ಲಿವೆ.