ಬಿಗ್ ಬಾಸ್ ಕನ್ನಡ 10 ಸ್ಪರ್ಧಿ ಸಿರಿ ಉದ್ಯಮಿ ಪ್ರಭಾಕರ್ ಭೋರೆಗೌಡ ಅವರನ್ನು ಸರಳವಾಗಿ ದೇವಸ್ಥಾನದಲ್ಲಿ ವಿವಾಹ ಆಗಿದ್ದಾರೆ.
ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಅವರನ್ನು ಚಿಕ್ಕಬಳ್ಳಾಪುರದ ಬೋಗ ನಂದಿಶ್ವೇರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮೂಲತಃ ಮಂಡ್ಯದವರಾದ ಪ್ರಭಾಕರ್, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಬ್ಬರು ಗುರು ಹಿರಿಯರು ಮತ್ತು ಕುಟುಂಬದ ಸದಸ್ಯರೊಂದಿಗೆ ಸದ್ದಿಲ್ಲದೇ ಮದುವೆ ಆಗಿದ್ದಾರೆ.
ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಜೂನ್ 13ರಂದು ಸರಳವಾಗಿ ಮದುವೆ ನಡೆದಿದೆ. ಸದ್ಯ ನಟಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.