ಮದುವೆ ಆಗುವುದಾಗಿ ವಿಚ್ಛೇದಿತ ಮಹಿಳೆಯನ್ನು ನಂಬಿಸಿ ವಂಚಿಸಿದ ಬಿಜೆಪಿ ಜಿಲ್ಲಾ ಮುಖಂಡ ಶರತ್ ಕಲ್ಯಾಣಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಮದುವೆ ಆಗುವುದಾಗಿ ವಂಚಿಸಿದ್ದೂ ಅಲ್ಲದೇ 4 ಲಕ್ಷ ರೂ. ಪಡೆದು ವಾಪಸ್ ನೀಡದೇ ಉಂಡು ಹೋದ ಕೊಂಡು ಹೋದ ಎಂಬಂತೆ ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣದ ಮುಖ್ಯಸ್ಥನಾಗಿರುವ ಶರತ್ ಕಲ್ಯಾಣಿ ವಂಚಿಸಿದ್ದಾನೆ.
ಶರತ್ ಕಲ್ಯಾಣಿ ವಿರುದ್ಧ ಜುಲೈ 26ರಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಶರತ್ ನಾಪತ್ತೆಯಾಗಿದ್ದ. ಇದೀಗ ಪೊಲೀಸರು ವಿಜಯಪುರ ಬಳಿ ಶರತ್ ಕಲ್ಯಾಣಿಯನ್ನು ಬಂಧಿಸಿದ್ದಾರೆ.
ಶರತ್ ಕಲ್ಯಾಣಿ ಅದಾಗಲೇ ವಿವಾಹಯಾಗಿದ್ದರೂ ತಾನು ಅವಿವಾಹಿತ ಎಂದು ಹೇಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 43 ವರ್ಷದ ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ. ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದು ಅಲ್ಲದೇ, 4 ಲಕ್ಷ ಹಣವನ್ನೂ ದೋಚಿ ವಂಚಿಸಿದ್ದ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದರು.