ದಕ್ಷಿಣ ಕೊರಿಯಾದ ರಸ್ತೆ ಮತ್ತು ರೈಲ್ವೆ ಹಳಿಗಳನ್ನು ಬಾಂಬ್ ದಾಳಿ ಮೂಲದ ಉತ್ತರ ಕೊರಿಯಾ ಧ್ವಂಸಗೊಳಿಸಿದೆ. ಈ ಮೂಲಕ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೊಡ ಆವರಿಸಿದೆ.
ದಕ್ಷಿಣ ಕೊರಿಯಾ ಪರಮಾಣು ಶಾಸ್ತ್ರಸ್ತ್ರಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸದಂತೆ ತಡೆಯಲು ಉತ್ತರ ಕೊರಿಯಾ ಸಂಪರ್ಕ ರಸ್ತೆ ಹಾಗೂ ರೈಲ್ವೆ ಹಳಿಗಳನ್ನು ಕೇಂದ್ರೀಕರಿಸಿದ ಬಾಂಬ್ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ದಶಕಗಳ ಹಿಂದೆ ಎರಡೂ ದೇಶಗಳು ಒಂದಾಗಿದ್ದರೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ ಪ್ರಮುಖ ಶತ್ರು ಎಂದು ಘೋಷಿಸಿದ್ದರು. ಅಲ್ಲದೇ ಎರಡೂ ದೇಶಗಳ ನಡುವಿನ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು.
ಇತ್ತೀಚೆಗೆ ಸತತ ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ ಡ್ರೋಣ್ ಮೂಲಕ ದಕ್ಷಿಣ ಕೊರಿಯಾದ ಪ್ರಮುಖ ರಸ್ತೆ ಹಾಗೂ ರೈಲು ಸಂಪರ್ಕಗಳ ಮೇಲೆ ದಾಳಿ ನಡೆಸಿದೆ.
ದಕ್ಷಿಣ ಕೊರಿಯಾದ ಡ್ರೋಣ್ ಗಳು ಉತ್ತರ ಕೊರಿಯಾ ಮೇಲೆ ಹಾರಾಟ ನಡೆಸಿವೆ ಎಂದು ಆರೋಪಿಸಿರುವ ಉತ್ತರ ಕೊರಿಯಾ, ವಾಯುದಾಳಿ ತಡೆಯಲು ಸಾಕಷ್ಟು ಸಾಮರ್ಥ್ಯದ ಕೊರತೆ ಕಾರಣ ಮುನ್ನೆಚ್ಚರಿಕೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.