ಟಾಟಾ ಸಾಯಿ ಏರ್ ಲೈನ್ಸ್ ಲಿಮಿಟೆಡ್ ಅಥವಾ ವಿಸ್ತಾರ ಎಂದೇ ಖ್ಯಾತಿ ಪಡೆದಿರುವ ವಿಮಾನ ಸಂಸ್ಥೆ ಏರ್ ಇಂಡಿಯಾಗೆ ಜೊತೆ ನವೆಂಬರ್ ನಲ್ಲಿ ವಿಲೀನಗೊಳ್ಳಲಿದೆ.
ಏರ್ ಇಂಡಿಯಾ ಜೊತೆ ವಿಸ್ತಾರ ವಿಲೀನಗೊಳ್ಳುತ್ತಿರುವುದರಿಂದ ನವೆಂಬರ್ 12ರ ನಂತರ ಪ್ರಯಾಣಿಕರಿಗೆ ವಿಮಾನ ಪ್ರಯಾಣದ ಬುಕ್ಕಿಂಗ್ ಇರುವುದಿಲ್ಲ ಎಂದು ವಿಮಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
2024 ಸೆಪ್ಟೆಂಬರ್ 3ರಿಂದ ಬುಕ್ಕಿಂಗ್ ಸೌಲಭ್ಯವನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ನವೆಂಬರ್ 12ರಿಂದ ವಿಸ್ತಾರ ವಿಮಾನದಿಂದ ಪ್ರಯಾಣ ಸಾಧ್ಯವಾಗುವುದಿಲ್ಲ. ಆದರೆ ಸೆಪ್ಟೆಂಬರ್ 11ರವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಬುಕ್ಕಿಂಗ್ ಮಾಡಲಾದ ವಿಮಾನಗಳು ಸಂಚರಿಸಲಿವೆ ಎಂದು ವಿಸ್ತಾರ ಸಂಸ್ಥೆ ಸ್ಪಷ್ಟನೆ ನೀಡಿದೆ.
ಮುಂದಿನ ದಿನಗಳಲ್ಲಿ ವಿಸ್ತಾರದ ಎಲ್ಲಾ ವಿಮಾನಗಳು ಏರ್ ಇಂಡಿಯಾ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಏರ್ ಇಂಡಿಯಾ ನಿಗದಿಪಡಿಸಿದ ಮಾರ್ಗ ಮತ್ತು ಸಮಯದಲ್ಲಿ ಸಂಚರಿಸಲಿವೆ ಎಂದು ಏರ್ ಇಂಡಿಯಾ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.