ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.
2007-2102ರ ಅವಧಿಯಲ್ಲಿ ವಿಜಯ್ ಮಲ್ಯ ಮತ್ತು ಅವರ ಕಂಪನಿಗಳಿಗೆ ಬ್ಯಾಂಕ್ ಗಳು ಸುಮಾರು 180 ಕೋಟಿ ರೂ. ಸಾಲ ನೀಡಿವೆ ಎಂದು ನ್ಯಾಯಾಲಯ ಹೇಳಿದೆ.
2016 ಆಗಸ್ಟ್ ನಲ್ಲಿ ದಾಖಲಾದ ಪ್ರಕರಣದಲ್ಲಿ ಸಾಲ ಮರು ಪಾವತಿ ಮಾಡದೇ ವಂಚನೆ ಮಾಡಿರುವ ಪ್ರಕರಣದಲ್ಲಿ ವಿಜಯ್ ಮಲ್ಯ ಅಲ್ಲದೇ 10 ಮಂದಿ ಆರೋಪಿಗಳಾಗಿ ಎಫ್ ಐರ್ ದಾಖಲಾಗಿದೆ.
ಪ್ರಕರಣದ ಎಲ್ಲಾ ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗಲು ವಾರೆಂಟ್ ಮಾಡಲಾಗಿದೆ. ಆದರೆ ವಿಜಯ್ ಮಲ್ಯ ಅವರಿಗೆ ಮಾತ್ರ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ.