Thursday, November 21, 2024
Google search engine
Homeತಾಜಾ ಸುದ್ದಿಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪ್ರಚಾರದ ವೇಳೆ ಹಲ್ಲೆ: ಕಪ್ಪು ಮಸಿ ದಾಳಿ

ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪ್ರಚಾರದ ವೇಳೆ ಹಲ್ಲೆ: ಕಪ್ಪು ಮಸಿ ದಾಳಿ

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಕನ್ಹಯ್ಯ ಕುಮಾರ್ ಮೇಲೆ ವಾಯುವ್ಯ ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸುಮಾರು 8ರಿಂದ 10 ಮಂದಿಯ ಗುಂಪು ಹಲ್ಲೆ ನಡೆಸಿದ್ದು, ಕಪ್ಪು ಶಾಹಿ (ಇಂಕ್) ಎರಚಿದ್ದಾರೆ.

ಶುಕ್ರವಾರ ಉಸಾಂಪುರ್ ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಗುಂಪು ದಾಳಿ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದಾಳಿ ಮಾಡಿದ 8 ಮಂದಿಯ ಪೈಕಿ ಇಬ್ಬರು ದಾಳಿಯ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಭಾರತೀಯ ಸೇನೆ ವಿರುದ್ಧ ಹೇಳಿಕೆ ಹಾಗೂ ಭಾರತವನ್ನು ಇಬ್ಭಾಗದ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡನಿಗೆ ಬುದ್ದಿ ಕಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಆಮ್ ಆದ್ಮಿ ಪಕ್ಷ ಕೌನ್ಸಿಲರ್ ಛಾಯಾ ಗೌರವ್ ಸಿಂಗ್ ಮತ್ತು ಕನ್ಹಯ್ಯ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, 8-10 ಮಂದಿಯ ಗುಂಪು ದಾಳಿ ನಡೆಸಿದ್ದರಿಂದ ನಾಲ್ಕೈದು ಮಹಿಳೆಯರು ಗಾಯಗೊಂಡಿದ್ದು, ಪತ್ರಕರ್ತರೊಬ್ಬರು ಚರಂಡಿಗೆ ಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನನ್ನು ಪಕ್ಕಕ್ಕೆ ಎಳೆದೊಯ್ದ ದುಷ್ಕರ್ಮಿಗಳು ಪ್ರಚಾರದಲ್ಲಿ ಭಾಗಿಯಾದರೆ ನಿನ್ನ ಹಾಗೂ ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಛಾಯಾ ಗೌರವ್ ಸಿಂಗ್ ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments