Wednesday, October 30, 2024
Google search engine
Homeಅಪರಾಧಪತ್ನಿಗೆ ಬುದ್ದಿ ಕಲಿಸಲು ಮದುವೆಗೆ ಮುನ್ನ ಮಗನನ್ನೇ ಕೊಂದ ತಂದೆ!

ಪತ್ನಿಗೆ ಬುದ್ದಿ ಕಲಿಸಲು ಮದುವೆಗೆ ಮುನ್ನ ಮಗನನ್ನೇ ಕೊಂದ ತಂದೆ!

ಅತಿಯಾಗಿ ಆಡುತ್ತಿದ್ದ ಪತ್ನಿಗೆ ಬುದ್ದಿ ಕಲಿಸಲು ಜಿಮ್ ತರಬೇತುದಾರನಾಗಿದ್ದ 29 ವರ್ಷದ ಮಗನನ್ನೇ ತಂದೆ ಕೊಲೆ ಮಾಡಿದ್ದಾನೆ.

ತಂದೆ 54 ವರ್ಷದ ರಂಗ್ ಲಾಲ್ ದಕ್ಷಿಣ ದೆಹಲಿ ಮದುವೆಗೆ ಕೆಲವೇ ಗಂಟೆಗಳ ಮುನ್ನ ಮಗ ಗೌರವ್ ಸಿಂಘಾಲ್ ನನ್ನು ಸುಮಾರು 15 ಬಾರಿ ಮುಖ ಮತ್ತು ಎದೆಗೆ ಇರಿದು ಹತ್ಯೆ ಮಾಡಿದ್ದಾನೆ.

ಕೆಲವು ದಿನಗಳ ಹಿಂದೆ ನಡೆದ ಈ ಘಟನೆ ಆಧರಿಸಿ ಪೊಲೀಸರು ರಂಗ್ ಲಾಲ್ ನನ್ನು ಜೈಪುರದಲ್ಲಿ ಬಂಧಿಸಿದ್ದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಗನ ಹತ್ಯೆಗೆ 5-6 ತಿಂಗಳ ಹಿಂದೆಯೇ ಸಂಚು ರೂಪಿಸಿದ್ದು, ಅತಿಯಾಗಿ ಆಡುತ್ತಿದ್ದ ಪತ್ನಿಗೆ ಬುದ್ದಿ ಕಲಿಸಲು ಹೆತ್ತ ಮಗನನ್ನೇ ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾನೆ.

ಫೆಬ್ರವರಿ 7ರಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನೀಡುವ ಮುನ್ನವೇ ಆತ ಮೃತಪಟ್ಟಿದ್ದ. ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕೊಲೆ ಆರೋಪಿ ಫೊನ್ ಸ್ವಿಚ್ ಆಫ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದನ್ನು ಗಮನಿಸಿದರು.

ಪತ್ನಿ ಹಾಗೂ ಮಗನ ಜೊತೆ ಆರೋಪಿ ರಂಗ್ ಲಾಲ್ ಗೆ ಸಂಬಂಧ ಸರಿಯಿರಲಿಲ್ಲ. ಆದ್ದರಿಂದ ಪತ್ನಿಗೆ ಬುದ್ದಿ ಕಲಿಸಲು ಸಂಚು ರೂಪಸಿದ್ದ ತಂದೆ, 75 ಸಾವಿರ ರೂ. ನೀಡಿ ಮೂವರಿಗೆ ಸುಪಾರಿ ನೀಡಿದ್ದ. ಮನೆಯಿಂದ ಪರಾರಿ ಆಗುವಾಗ 50 ಲಕ್ಷ ಮೌಲ್ಯದ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ತೆಗೆದುಕೊಂಡಿದ್ದ.

ಮಗನನ್ನು ಕೊಲೆ ಮಾಡಿದ್ದಕ್ಕೆ ತಂದೆಗೆ ಯಾವುದೇ ಪಶ್ಚಾತಾಪ ಇರಲಿಲ್ಲ. ಗೌರವ ಕೊಡದೇ ಮಗ ಮತ್ತು ಅವನ ಜೀವನ ಶೈಲಿ ಬಗ್ಗೆ ತಂದೆಗೆ ಅಸಮಾಧಾನವಿತ್ತು. ಮಗನಿಗೆ ತಾಯಿ ಬೆಂಬಲ ನೀಡುತ್ತಿದ್ದರಿಂದ ಅಸಮಾಧಾನ ದ್ವೇಷಕ್ಕೆ ತಿರುಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments