Sunday, December 7, 2025
Google search engine
Homeಅಪರಾಧಯುವತಿಯ ಮೋಹಕ್ಕೆ ಬಿದ್ದ ಟೆಕ್ಕಿಗೆ 8 ಲಕ್ಷ ರೂ. ವಂಚನೆ: ಪೊಲೀಸ್ ಎಂದು ಹೇಳಿಕೊಂಡ ಮಹಿಳೆ...

ಯುವತಿಯ ಮೋಹಕ್ಕೆ ಬಿದ್ದ ಟೆಕ್ಕಿಗೆ 8 ಲಕ್ಷ ರೂ. ವಂಚನೆ: ಪೊಲೀಸ್ ಎಂದು ಹೇಳಿಕೊಂಡ ಮಹಿಳೆ ಅರೆಸ್ಟ್!

ಯುವತಿಯ ಮೋಹಕ್ಕೆ ಬಿದ್ದ ಸಾಫ್ಟ್‌ವೇರ್ ಇಂಜಿನಿಯರ್ 8.1 ಲಕ್ಷ ರೂ. ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

29 ವರ್ಷದ ಟೆಕ್ಕಿ ಆನ್‌ಲೈನ್‌ ಪೋರ್ಟಲ್‌ ಮೂಲಕ ಎಸ್ಕಾರ್ಟ್‌ ಸೇವೆಗಾಗಿ ಕಾಲ್ ಗರ್ಲ್ ಗೆ ಕರೆ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.

ಎಲೆಕ್ಟ್ರಾನಿಕ್ಸ್ ಸಿಟಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗೌತಮ್‌ (ಹೆಸರು ಬದಲಿಸಲಾಗಿದೆ)ಗೆ ಅಮೃತಾ ಗಿಲ್‌ ಎಂಬ ಕಾಲ್‌ ಗರ್ಲ್‌ ಮೊಬೈಲ್‌ ನಂಬರ್‌ ಸಿಕ್ಕಿತ್ತು. ಮಸಾಜ್‌ ರಿಪಬ್ಲಿಕ್‌ ಡಾಟ್‌ ಕಾಂ ಎಂಬ ಸೈಟ್‌ನಿಂದ ಈ ನಂಬರ್‌ ಪಡೆದುಕೊಂಡಿದ್ದ. ಆತ ಆಕೆಗೆ ಕರೆ ಮಾಡಿದ್ದ. ಅವಳು ತನ್ನನ್ನು ರೂಪಾ ಎಂದು ಪರಿಚಯ ಮಾಡಿಕೊಂಡಿದ್ದಳು.

ಆಕೆಯನ್ನು ೩ ಗಂಟೆಗಳ ಅವಧಿಗೆ 15 ಸಾವಿರ ರೂ.ಗೆ ನವೆಂಬರ್ 29ರಂದು ರೆಸಿಡೆನ್ಸಿ ರಸ್ತೆಯ ಹೋಟೆಲ್‌ನಲ್ಲಿ ರೂಂ ಕಾಯ್ದಿರಿಸಿದ್ದ.  ಸಂಜೆ 6.15ರ ಹೊತ್ತಿಗೆ ರೂಪ ಗೌತಮ್‌ನನ್ನು ಭೇಟಿಯಾಗಿದ್ದಳು. ಆದರೆ ಆಕೆ ಹೇಳಿಕೊಂಡಂತೆ 18 ವರ್ಷದವಳಲ್ಲ, 30 ವರ್ಷ ಆಸುಪಾಸಿನವಳು ಎಂದು ಗೌತಮ್‌ ಗಮನಕ್ಕೆ ಬಂತು.

ರೂಪಾಗೆ ಗೌತಮ್‌ ಕ್ಯಾಬ್‌ ಚಾರ್ಜ್‌ ಸೇರಿ 16 ಸಾವಿರ ರೂ. ಪಾವತಿಸಿದ್ದ. ಆದರೆ ಬಂದವಳೇ ತಾನು ಮಫ್ತಿಯಲ್ಲಿರುವ ಪೊಲೀಸ್‌, ನಿನ್ನನ್ನು ಬಂಧಿಸಲು ಬಂದಿರುವುದು ಎಂದು ನಾಟಕ ಆಡಲು ಶುರು ಮಾಡಿದಳು.

ವಾಟ್ಸಾಪ್‌ ಕಾಲ್‌:

ಖಾಕಿ ಯೂನಿಫಾರ್ಮ್‌ ಹಾಕಿದ ವ್ಯಕ್ತಿಯ ಚಿತ್ರ ಇರುವ ನಂಬರ್‌ನಿಂದ ವಾಟ್ಸಾಪ್‌ ಕಾಲ್‌ ಬಂತು. ನಾನು ಹಿತೇಶ್‌ ಕುಮಾರ್‌ ಐಪಿಎಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡ ಆತ, ತಾನ ಈ ಮಹಿಳೆಯ ಸಹೋದ್ಯೋಗಿ ಎಂದು ಹೇಳಿದ. ರೂಪಾ ಗೌತಮ್‌ ಫೋನ್‌ ಕಿತ್ತುಕೊಂಡು ಲೌಡ್‌ ಸ್ಪೀಕರ್‌ಗೆ ಹಾಕಿದಳು, ಆಗ ಕುಮಾರ್‌ ನೀನು ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದಿ ಎಂದು ಹೆದರಿಸಿದ್ದಾನೆ.

ನನ್ನನ್ನು ಬಂಧಿಸದೇ ಇರಲು 10 ಲಕ್ಷ ಕೊಡಿ ಎಂದು ಆರಂಭದಲ್ಲಿ ಬೇಡಿಕೆ ಇಟ್ಟರು. ನನ್ನ ಬಳಿ ಅಷ್ಟೊಂದು‌ ಹಣ ಇಲ್ಲ ಎಂದರೆ. ನನ್ನನ್ನು ಪೊಲೀಸ್ ಠಾಣೆಗೆ ಎಳೆದೊಯ್ಯುತ್ತೇವೆ ಎಂದು ಬೆದರಿಸಿ‌, ಒತ್ತಾಯವಾಗಿ ಕ್ರೆಡಿಟ್‌ ಕಾರ್ಡ್‌ ಕಸಿದುಕೊಂಡ ರೂಪಾ, ಇನ್ನುಳಿದ ಎರಡು ಕ್ರೆಡಿಟ್‌ ಕಾರ್ಡ್‌ಗಳ ವಿವರವೂ ಪಡೆದು ಬೇರೆ ಬೇರೆ ಖಾತೆಗಳಿಗೆ 8.1 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾಳೆ. ರಾತ್ರಿ 8.30ರವರೆಗೆ ಈ ವಸೂಲಿ ಮಾಡುವ ಕೆಲಸ ನಡೆದಿದೆ.

ಆಗ ಗೌತಮ್‌ ಪೊಲೀಸ್‌ ಠಾಣೆಗೆ ಹೋಗೋಣ, ಇದನ್ನೆಲ್ಲ ಅಲ್ಲೇ ಬಗೆಹರಿಸೋಣ ಎಂದು ಹೇಳಿದ್ದಾನೆ. ಹೋಟೆಲ್‌ ಸಿಬ್ಬಂದಿಗೆ ತನ್ನಿಂದ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂದು ವಿವರಿಸಿ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಲು ಹೇಳಿದ್ದಾನೆ. ಅವರು ಕರೆ ಮಾಡುತ್ತಿದ್ದಂತೆ ಕರೆ ಕಟ್‌ ಮಾಡಿದ ಆಕೆ ಅಲ್ಲಿಂದ ಓಡಿ ಹೋಗಿದ್ದಾಳೆ.

ರಸ್ತೆಯಲ್ಲಿ ಡ್ರಾಮಾ:

ರಸ್ತೆಯಲ್ಲಿ ತಾನೇ ಬಟ್ಟೆ ಹರಿದುಕೊಂಡು, ಗೌತಮ್‌ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡ ಎಂದು ಅಲ್ಲಿದ್ದವರ ಬಳಿ ಸಹಾಯವನ್ನೂ ಯಾಚಿಸಿದ್ದಾಳೆ. ಗೌತಮ್‌ ಕೈಯನ್ನೂ ಕಚ್ಚಿ ಓಡಿ ಹೋಗಲು ಯತ್ನಿಸಿದ್ದಾಳೆ, ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ಬಂಧಿಸಿದ್ದಾರೆ.

ಆಗಲೂ ತನಗೆ ಪ್ರಜ್ಞೆ ತಪ್ಪಿದಂತೆ ಎಲ್ಲ ನಾಟಕ ಮಾಡಿದರೂ ಕ್ಯಾರೇ ಅನ್ನದ ಪೊಲೀಸರು ಗಾಡಿ ಹತ್ತಿಸಿ ಕರೆದೊಯ್ದಿದ್ದಾರೆ. ನಂತರ ಗೌತಮ್‌ಗೆ 1930 ಸೈಬರ್‌ ಕ್ರೈಂ ಪೊಲೀಸ್‌ಗೆ ಕರೆ ಮಾಡಲು ಸಹಾಯ ಮಾಡಿದ ಪೊಲೀಸರು ಹಣ ರವಾನಿಸಿದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲು ಸಹಾಯ ಮಾಡಿದ್ದಾರೆ.

ರೂಪಾ ಬಳಿಯಲ್ಲಿದ್ದ ಆಧಾರ್‌ ಕಾರ್ಡ್‌ನಲ್ಲಿ ಆಕೆಯ ಹೆಸರು ಪೂಜಾ, 31 ವರ್ಷ ಎಂದು ತಿಳಿದು ಬಂದಿದೆ. ಪೊಲೀಸರು ಆಕೆಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments