Sunday, July 20, 2025
Google search engine
Homeದೇಶ55 ವರ್ಷದಲ್ಲೇ 2ನೇ ಬಾರಿ ತೆಲಂಗಾಣದಲ್ಲಿ ಪ್ರಬಲ ಭೂಕಂಪನ!

55 ವರ್ಷದಲ್ಲೇ 2ನೇ ಬಾರಿ ತೆಲಂಗಾಣದಲ್ಲಿ ಪ್ರಬಲ ಭೂಕಂಪನ!

ತೆಲಂಗಾಣದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಪ್ರಬಲ ಭೂಕಂಪನ 55 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ್ದಾಗಿ ದಾಖಲೆ ಬರೆದಿದೆ.

ಬುಧವಾರ ಬೆಳಿಗ್ಗೆ 7.27ರ ಸುಮಾರಿಗೆ ಮುಳುಗು ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದೆ. ಇದು ಕಳೆದ 55 ವರ್ಷಗಳಲ್ಲೇ 2ನೇ ಅತೀ ದೊಡ್ಡ ಭೂಕಂಪನವಾಗಿದೆ.

1969 ಏಪ್ರಿಲ್ 13ರಂದು ಭದ್ರಾಚಲಂನಲ್ಲಿ 5.7 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಭೂವಿಜ್ಞಾನ ತಜ್ಞರ ಪ್ರಕಾರ ಎರಡು ಬಾರಿ ಸಂಭವಿಸಿದ ಪ್ರಬಲ ಭೂಕಂಪನಗಳು ಗೋದಾವರಿ ನದಿ ಪಾತ್ರದಲ್ಲಿ ಆಗಿರುವುದು ವಿಶೇಷ ಎಂದು ಹೇಳಿದರು.

ಬುಧವಾರ ಸಂಭವಿಸಿದ ಭೂಕಂಪನದಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಆಗಿಲ್ಲ. ಸಣ್ಣ ಪ್ರಮಾಣದಲ್ಲಿ ಕಂಪನದ ಅನುಭವ ಸ್ಥಳೀಯರಿಗೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments