Wednesday, December 24, 2025
Google search engine
Homeಅಪರಾಧಹುಬ್ಬಳ್ಳಿಯಲ್ಲಿ ಎನ್ ಕೌಂಟರ್ ಆದ ಬಾಲಕಿಯ ಹತ್ಯಾಚಾರಿಯ ಫೋಟೊ ಬಿಡುಗಡೆ

ಹುಬ್ಬಳ್ಳಿಯಲ್ಲಿ ಎನ್ ಕೌಂಟರ್ ಆದ ಬಾಲಕಿಯ ಹತ್ಯಾಚಾರಿಯ ಫೋಟೊ ಬಿಡುಗಡೆ

ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಏನ್ ಕೌಂಟರ್ ಗೆ ಬಲಿಯಾದ ಹಂತಕನ ಫೋಟೋವನ್ನು ನಗರ ಪೊಲೀಸರು ಬುಧವಾರ ಬಿಡುಗಡೆ ಮಾಡಿದ್ದಾರೆ.

ಎನ್‌ಕೌಂಟರ್‌ಗೆ ಬಲಿಯಾದ ರಿತೇಶ್‌ ಕುಮಾರ್‌ (35)ಮೃತದೇಹವು ಕಿಮ್ಸ್ ಶವಗಾರದಲ್ಲಿ ಅನಾಥವಾಗಿ ಬಿದ್ದಿದೆ. ಕುಟುಂಬಸ್ಥರ ಪತ್ತೆಗೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್‌ ಠಾಣೆಯು ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಿದೆ.

ಈತ ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ. ಅಲ್ಲದೇ, ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ‘ಓಂ ನಮಃ ಶಿವಾಯ ಜಯ ಸಂಜಯ’ ಎಂಬ ಟ್ಯಾಟು ಗುರುತು ಸಹ ಇದೆ. ಈತನ ಗುರುತು ಪರಿಚಯ ಇದ್ದವರು ಕೂಡಲೇ 0836-2233490 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ನಡೆದಿತ್ತು. ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದರು. ಪೊಲೀಸರ ಗುಂಡೇಟಿಗೆ ಹಂತಕ ರಿತೇಶ್‌ ಕುಮಾರ್‌ ಬಲಿಯಾಗಿದ್ದ.

ಮಾರ್ಗಸೂಚಿಯಂತೆ ಕ್ರಮ:

ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಹಂತಕನ ಏನ್ ಕೌಂಟರ್ ಬಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ನಿಭಾಯಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾ‌ರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರೋಪಿಯನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ, ತಪ್ಪಿಸಿಕೊಳ್ಳುವ ವೇಳೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇಂತಹ ಪ್ರಕರಣದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ಇದೆ ಅದರಂತೆ ನಡೆದಿದೆ ಎಂದರು.

ಆರೋಪಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ, ನ್ಯಾಯಾಗ ತನಿಖೆ ಮಾಡಬೇಕೆಂದಿತ್ತು. ಅದು ಕೂಡ ಆಗುತ್ತಿದೆ. ಆರೋಪಿಯ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ, ಆತ ವಾಸವಿದ್ದ ಸ್ಥಳದಲ್ಲಿ ಹಾಗೂ ಆತ ಸಂಚರಿಸಿದ ಎಲ್ಲಾ ಕಡೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ಸಂಬಂಧಿಕರ ಪತ್ತೆಗೆ ಕ್ರಮ:

ಮರಣೋತ್ತರ ಪರೀಕ್ಷೆ ಬಳಿಕ ಆತನಿಗೆ ಅವರಿಗೆ ಸಂಬಂಧ ಪಟ್ಟವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಭಾಷೆಗಳಲ್ಲಿ ಆರೋಪಿಯ ವಿವರಗಳನ್ನು ಬೇರೆ ಬೇರೆ ಕಡೆ ಕಳಿಸಲಾಗಿದೆ. ಆತ ಪಾಟ್ನಾದವನಾಗಿದ್ದಾನೆ ಎಂಬ ಮಾಹಿತಿ ಇದೆ. ಆತನ ಸಂಬಂಧಿಕರು ಪತ್ತೆಯಾಗದಿದ್ದರೆ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ ಚಾಚೂ ತಪ್ಪದೇ ಪಾಲನೆ ಮಾಡಲಾಗುತ್ತಿದೆ. ಅವರ ಕುಟುಂಬಸ್ಥರು ಬರುವ ತನಕ ಕೋಲ್ಡ್ ಸ್ಟೋರೇಜ್ ನಲ್ಲಿ ಕೆಲವು ದಿನಗಳ ಕಾಲ ಶವ ಇರಿಸಲಾಗುತದೆ. ಇಷ್ಟಾದರೂ ಆತನ ಸಂಬಂಧಿಕರು ಬಾರದಿದ್ದರೆ ಮಣ್ಣು ಮಾಡುವ ಪ್ರಕ್ರಿಯೆಯನ್ನು ಕಾನೂನು ತಜ್ಞರ ಸಲಹೆ ಪಡೆದು ಮುಂದುವರೆಯುತ್ತೇವೆ ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಏನೇ ಕೇಳಿದರೂ ಉತ್ತರ ನೀಡಲು ಸಿದ್ದವಿದ್ದೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments