ಸಮಾಜ ನಮ್ಮ ಪ್ರೀತಿ ಒಪ್ಪಲ್ಲ ಎಂಬ ಕಾರಣಕ್ಕೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಜಾನ್ಸನ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಿಯಕರ ಸಾವಿನ ಸುದ್ದಿ ಕೇಳಿ ಪ್ರೇಯಸಿ ದಿಲ್ಸಾದ್ ಶನಿವಾರ ಬೆಳಿಗ್ಗೆ ಶ್ರೀರಾಮಪುರದ ಅಮೃತಹಳ್ಳಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಿಲ್ಶಾದ್ ಮತ್ತು ಜಾನ್ಸನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ದಿಲ್ಶಾದ್ ಗೆ ಮದುವೆ ಆಗಿದ್ದರೆ, ಜಾನ್ಸನ್ ಗೆ ಮದುವೆ ಆಗಿರಲಿಲ್ಲ.
ದಿಲ್ಶಾದ್ ಗೆ ವಿಜಯಪುರ ಮೂಲದ ಕೃಷ್ಣ ಎಂಬುವವರ ಜೊತೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆಕೆಯ ಗಂಡ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಿಲ್ಶಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.