Wednesday, November 12, 2025
Google search engine
HomeಬೆಂಗಳೂರುBengaluru ಬಿಬಿಎಂಪಿ ಕಸದ ಲಾರಿ ಹರಿದು ಸೋದರಿಯರು ಬಲಿ

Bengaluru ಬಿಬಿಎಂಪಿ ಕಸದ ಲಾರಿ ಹರಿದು ಸೋದರಿಯರು ಬಲಿ

ಓವರ್ ಟೇಕ್ ಮಾಡುವ ಆತುರದಲ್ಲಿ ಬಿಬಿಎಂಪಿ ಲಾರಿಗೆ ಡಿಕ್ಕಿ ಹೊಡೆದು ಸೋದರಿಯರು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ಸಂಭವಿಸಿದೆ.

ಥಣಿ ಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದ ಬಳಿ ಶನಿವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಗೋವಿಂದಪುರ ನಿವಾಸಿಗಳಾದ ನಾಜಿಯಾ ಸುಲ್ತಾನ್, ನಾಜಿಯಾ ಇರ್ಫಾನ್ ಮೃತಪಟ್ಟಿದ್ದಾರೆ.

ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಮಹಿಳೆಯರು ಎಡಗಡೆಯಿಂದ ಕಸದ ಲಾರಿ ಓವರ್ ಟೇಕ್ ಮಾಡಲು ಯತ್ನಿಸಿದಾಗ ಲಾರಿ ಡಿಕ್ಕಿ ಹೊಡೆದು ಅದರ ಕೆಳಗೆ ಬಿದ್ದಿದ್ದಾರೆ. ಲಾರಿ ಇಬ್ಬರ ಮೇಲೆ ಹರಿದ ಕಾರಣ ಸ್ಥಳದಲ್ಲೇ ಸೋದರಿಯರು ಮೃತಪಟ್ಟಿದ್ದಾರೆ.

ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದ್ದು, ಲಾರಿ ಚಾಲಕನನ್ನು ಹೆಣ್ಣೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments